ವಿದೇಶ

ಹೆಚ್‌1ಬಿ ವೀಸಾ ಬಗ್ಗೆ ಒಲವು ತೋರಿದ ಅಮೆರಿಕ ಅಧ್ಯಕ್ಷ ಟ್ರಂಪ್‌

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪದಗ್ರಹಣಗೊಂಡ ಬೆನ್ನಲ್ಲೇ ಮತ್ತೊಂದು ಮಹತ್ವದ ಸುಳಿವು ನೀಡಿದ್ದಾರೆ..

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪದಗ್ರಹಣಗೊಂಡ ಬೆನ್ನಲ್ಲೇ ಮತ್ತೊಂದು ಮಹತ್ವದ ಸುಳಿವು ನೀಡಿದ್ದಾರೆ.. ಹೆಚ್‌1ಬಿ ವೀಸಾ ಪದ್ಧತಿ ಬಹುತೇಕ ಯಥಾಸ್ಥಿತಿಯಲ್ಲಿ ಮುಂದುವರಿಯುವ ಭರವಸೆ ನೀಡಿದ್ದಾರೆ.. ಹೆಚ್1ಬಿ ವೀಸಾ ಯೋಜನೆಯಿಂದ ದೇಶಕ್ಕೆ ಗುಣಮಟ್ಟದ ಕೆಲಸಗಾರರು ಬರಲು ಸಾಧ್ಯವಾಗುತ್ತೆ ಎಂದು ಹೇಳಿದ್ದಾರೆ..  ನನಗೆ ಹೆಚ್1ಬಿ ವೀಸಾ ಯೋಜನೆ ಬಗ್ಗೆ ಚೆನ್ನಾಗಿ ಗೊತ್ತಿದೆ.. ಅಮೆರಿಕಕ್ಕೆ ಉತ್ಕೃಷ್ಟ ಎಂಜಿನಿಯರುಗಳು ಮಾತ್ರವಲ್ಲ, ಎಲ್ಲಾ ರೀತಿಯಿಂದಲೂ ಗುಣಮಟ್ಟದ ಕೆಲಸಗಾರರು ಬರುವಂತಾಗಬೇಕು ಎಂಬುದು ಅವರ ಅನಿಸಿಕೆ.. ‘ನನಗೆ ಎರಡೂ ಕಡೆಯ ವಾದದಲ್ಲಿ ಒಪ್ಪಿಗೆ ಇದೆ. ಆದರೆ, ನಮ್ಮ ದೇಶಕ್ಕೆ ಸ್ಪರ್ಧಾತ್ಮಕ ಜನರು ಬರಬೇಕೆಂದು ಬಯಸುತ್ತೇನೆ.. ಇತರ ಜನರಿಗೆ ಅವರು ಬಂದು ತರಬೇತಿ ಕೊಡುತ್ತಾರೆಂದೂ ಸರಿ.. ನನಗೆ ಹೆಚ್1ಬಿ ವೀಸಾ ನಿಲ್ಲಿಸುವುದು ಬೇಕಿಲ್ಲ.. ಎಂಜಿನಿಯರುಗಳಿಗೆ ಮಾತ್ರವೇ ಈ ವಲಸೆ ಸೀಮಿತವಾಗದೆ, ಎಲ್ಲಾ ಮಟ್ಟದ ವ್ಯಕ್ತಿಗಳೂ ಬರುವಂತಾಗಬೇಕು’ ಎಂದು ಅಮೆರಿಕದಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ..