ಕರ್ನಾಟಕ

ದಲಿತರ ಪರ ನಿಲ್ಲದ ನಿಮ್ಮ ವಾದ ಯಾರ ಓಲೈಕೆಗಾಗಿ; ಛಲವಾದಿ ನಾರಾಯಣಸ್ವಾಮಿ

ಪ್ರಿಯಾಂಕಾ ಗಾಂಧಿಯನ್ನು ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಕೆ ಮಾಡಿದ್ದಕ್ಕೆ, ಛಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿಯನ್ನು ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಕೆ ಮಾಡಿದ್ದಕ್ಕೆ, ಛಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ದಲಿತರ ಪರವಾಗಿ ನಿಲ್ಲದ ನಿಮ್ಮ ವಾದ ಯಾರ ಓಲೈಕೆಗಾಗಿ. ಇಂದಿರಾಗಾಂಧಿ ಮಾಡಿದ್ದು ಸರಿಯಲ್ಲ ಎಂದು ಒಮ್ಮೆಯಾದ್ರೂ ಹೇಳಿದ್ರಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡಿದ್ದು ಸರಿಯಾಗಿ ಇತ್ತಾ. ಕಾಂಗ್ರೆಸ್‌ಗೆ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ ಅಂತ ಅಂಬೇಡ್ಕರ್ ಹೇಳಿದ್ದಾರೆ..ಸುಡುವ ಮನೆ ಕಾಂಗ್ರೆಸ್ ಅಂತ ಅಂಬೇಡ್ಕರ್ ಅವರು ಹೇಳಿದ್ರು..ಆದರೆ ಅಂಬೇಡ್ಕರ್ ಗೆಲ್ಲಿಸಿದ್ದು ಕಾಂಗ್ರೆಸ್, ಸೋಲಿಸಿದ್ದು ಜನಸಂಘ ಅಂತ ಯಾವ ನಾಲಗೆಯಿಂದ ಹೇಳ್ತೀರಾ..ಕರ್ನಾಟಕದಲ್ಲಿ ದಲಿತರು ಸಮಾಧಿಯಾಗುತ್ತಾರೆ..ನಾನೇ ಸಿಎಂ ಆಗಬೇಕು ಅಂತ ಕಾಂಗ್ರೆಸ್ ನಲ್ಲಿ ಚರ್ಚೆ ಮಾಡ್ತೀರಾ..ಯಾರನ್ನಾದರೂ ಸಿಎಂ ಮಾಡಿ, ಆದರೆ ಇಷ್ಟೊಂದು ವರ್ಷ ಆಯ್ತು ದಲಿತರನ್ನು ಸಿಎಂ ಮಾಡಿದ್ರಾ..ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಿದ್ರಿ ಎಂದು ಕಿಡಿ ಕಾರಿದ್ದಾರೆ.