ಮತ್ತೆ ರೇಣುಕಾಚಾರ್ಯ ಸುದ್ದಿಗೋಷ್ಠಿ ವಿಚಾರಕ್ಕೆ ಮಾಜಿ ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅಶ್ವತ್ಥನಾರಾಯಣ್, ಬಿಜೆಪಿಯಲ್ಲಿ ಯಾವ ಕೋಲ್ಡ್ ವಾರ್ ಕೂಡ ಇಲ್ಲ. ಎಲ್ಲರಿಗೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸೋದಕ್ಕೆ ಸ್ವಾತಂತ್ರ್ಯ ಕೊಟ್ಟಿದೆ. ಆದರೆ, ಚುನಾವಣೆ ನಡೆಯುವ ಪರಿಸ್ಥಿತಿ ಬಂದಾಗ ಚುನಾವಣೆ ನಡೆಸೋರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ನಿನ್ನೆ ನಡೆದ ಸಭೆಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಶಾಸಕರ ಅಕ್ಷೇಪ ವಿಚಾರಕ್ಕೂ ಅಶ್ವತ್ಥನಾರಾಯಣ್ ಪ್ರತಿಕ್ರಿಯಿಸಿದ್ದು,ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಸೋತ ಶಾಸಕರು, ಎಂಎಲ್‌ಎಗಳು ಮೀಟಿಂಗ್‌ಗೆ ಭಾಗವಹಹಿಸುತ್ತಾರೆ. ಎಲ್ಲಿ ಚುನಾಯಿತ ಪ್ರತಿನಿಧಿ ಇರ್ತಾರೆ ಅವರನ್ನ ಸಭೆಗೆ ಕರೆಯಲಾಗುತ್ತೆ. ಎಲ್ಲರು ಚುನಾವಣೆಯಲ್ಲಿ ಭಾಗವಹಿಸಬೇಕು ಎಂದಿದ್ದಾರೆ. ಯತ್ನಾಳ್ ಹಾಗೂ ನನ್ನ ಪಕ್ಷದಿಂದ ತೆಗೆದುಹಾಕಬೇಕಾದ್ರೆ ದಮ್ ಬೇಕು ಅನ್ನೋ ಜಿಟಿ ದೇವೇಗೌಡರ ಹೇಳಿಕೆ ವಿಚಾರಗೆ ಪ್ರತಿಕ್ರಿಯೆ ನೀಡಲು ನಾಕಾರವೆತ್ತಿದ ಅಶ್ವತ್ಥನಾರಾಯಣ್, ಚೆನ್ನಾಗಿ ಬೆಳೆದರೋ ನಾಯಕರು ಅವರ ಬಗ್ಗೆ ಪ್ರಶ್ನೆ ಮಾಡೊಲ್ಲ ಎಂದಿದ್ದಾರೆ.