ಕರ್ನಾಟಕ

ಯೋಗಾನರಸಿಂಹಸ್ವಾಮಿ ದೇಗುಲಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಭೇಟಿ

ವಿಜಯನಗರದಲ್ಲಿರುವ ಸುದರ್ಶನ ನರಸಿಂಹ ಕ್ಷೇತ್ರ ಎಂದೇ ಖ್ಯಾತಿಯಾಗಿರುವ ಯೋಗಾನರಸಿಂಹಸ್ವಾಮಿ ದೇಗುಲಕ್ಕೆ ಗಾಯಕಿ ಎಸ್ ಜಾನಕಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಮೈಸೂರು : ಶ್ರೀ‌ ಯೋಗಾನರಸಿಂಹಸ್ವಾಮಿ ದೇಗುಲಕ್ಕೆ ಇಂದು ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ ಭೇಟಿ ನೀಡಿದ್ದಾರೆ. ಮೈಸೂರು ಜಿಲ್ಲೆಯ ವಿಜಯನಗರದಲ್ಲಿರುವ ಸುದರ್ಶನ ನರಸಿಂಹ ಕ್ಷೇತ್ರ ಎಂದೇ ಖ್ಯಾತಿಯಾಗಿರುವ ಯೋಗಾನರಸಿಂಹಸ್ವಾಮಿ ದೇಗುಲಕ್ಕೆ ಗಾಯಕಿ ಎಸ್ ಜಾನಕಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸ್ವಾತಿ ನಕ್ಷತ್ರ ಪೂಜೆಯಲ್ಲಿ ಭಾಗಿಯಾದ ಎಸ್ ಜಾನಕಿ, ಯೋಗಾನರಸಿಂಹಸ್ವಾಮಿಗೆ ವಿಶೇಷ ಪ್ರರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಆಗಕಿಗೆ ಆಪ್ತರು ಸಾಥ್‌ ನೀಡಿದ್ದಾರೆ. ಇನ್ನೂ ದೇವಸ್ಥಾನದಲ್ಲಿ ಎಸ್.‌ ಜಾನಕಿಯವರನ್ನ ಕಾಣುತ್ತಿದ್ದಂತೆ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.