ದುಷ್ಕರ್ಮಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ವೇಳೆ ಆಸ್ಪತ್ರೆಗೆ ದಾಖಲಾಗಲು ನೆರವಾಗಿದ್ದ ಆಟೋ ಚಾಲಕನನ್ನ ಬಾಲಿವುಡ್ ನಟ ಸೈಫ್ ಅಲಿ ಖಾನ್ ಭೇಟಿಯಾಗಿ, ಧನ್ಯವಾದ ಹೇಳಿದ್ದಾರೆ.. ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆನ್ನಲ್ಲೇ ಆಟೋ ಚಾಲಕ ಭಜನ್ ಸಿಂಗ್ ಭೇಟಿಯಾಗಿದ್ದಾರೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಟೋ ಚಾಲಕ ಭಜನ್ ಸಿಂಗ್, ಅವರು ನನಗೆ ಧನ್ಯವಾದ ಅರ್ಪಿಸಿದರು, ನಾನು ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಅವರ ತಾಯಿ ಮತ್ತು ಇಡೀ ಕುಟುಂಬ ನನಗೆ ಹೇಳಿದರು.. ನಾನು ಅವರ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ.. ಅಂತಹ ದೊಡ್ಡ ತಾರೆಗಳನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ.. ಘಟನೆಯ ರಾತ್ರಿ, ನಾನು ಹಣ ಅಥವಾ ಬೇರೆ ಯಾವುದರ ಬಗ್ಗೆಯೂ ಯೋಚಿಸಲಿಲ್ಲ. ಅವರ ಜೀವವನ್ನು ಉಳಿಸಬೇಕೆಂದು ನಾನು ಬಯಸಿದ್ದೆ ಎಂದಿದ್ಧಾರೆ.. ಜನವರಿ 16ರಂದು ಚಾಕು ಇರಿತಕ್ಕೆ ಒಳಗಾಗಿದ್ದ ಸೈಫ್ ಅಲಿ ಖಾನ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾಜ್ ಆಗಿದ್ದಾರೆ.. ನಟನನ್ನ ನೋಡಲು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.