ದೇಶ

ದಿಲ್ಲಿ ಚುನಾವಣೆ ಹೊತ್ತಲ್ಲೇ ಕೇಂದ್ರಕ್ಕೆ ಕೇಜ್ರಿವಾಲ್‌ 7 ಡಿಮ್ಯಾಂಡ್‌..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1ಕ್ಕೆ ಮಂಡಿಸುವ ಬಜೆಟ್‌ನಲ್ಲಿ ಹೆಚ್ಚಿನ ಪಾಲು ಮಧ್ಯಮ ವರ್ಗಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದೆಹಲಿ ಚುನಾವಣೆ ಹೊತ್ತಿನಲ್ಲೇ ಎಎಪಿ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ 7 ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1ಕ್ಕೆ ಮಂಡಿಸುವ ಬಜೆಟ್‌ನಲ್ಲಿ ಹೆಚ್ಚಿನ ಪಾಲು ಮಧ್ಯಮ ವರ್ಗಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮಧ್ಯಮ ವರ್ಗಕ್ಕೆ ಆರ್ಥಿಕವಾಗಿ ಬಲತುಂಬಲು ಬಜೆಟ್‌ನಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರಕ್ಕೆ ಕೇಜ್ರಿವಾಲ್‌ ಡಿಮ್ಯಾಂಡ್‌ ಏನು..?
1. ಶಿಕ್ಷಣ ಬಜೆಟ್  2% ರಿಂದ 10% ಕ್ಕೆ ಹೆಚ್ಚಿಸಬೇಕು, ಶಾಲಾ ಶುಲ್ಕ ಮಿತಿಗೊಳಿಸಬೇಕು
2. ಉನ್ನತ ಶಿಕ್ಷಣಕ್ಕಾಗಿ ಸಬ್ಸಿಡಿಗಳು ಮತ್ತು ವಿದ್ಯಾರ್ಥಿವೇತನಗಳನ್ನು ನೀಡಬೇಕು
3. ಆರೋಗ್ಯ ಕ್ಷೇತ್ರದ ಬಜೆಟ್‌ 10%ಕ್ಕೆ ಹೆಚ್ಚಿಸಬೇಕು,, ಆರೋಗ್ಯ ವಿಮೆ ತೆರಿಗೆ ತೆಗೆದುಹಾಕಬೇಕು.
4. ಆದಾಯ ತೆರಿಗೆ ವಿನಾಯಿತಿ ಮಿತಿನ್ನು 7 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು
5. ಜಿಎಸ್‌ಟಿಯಿಂದ ಅಗತ್ಯ ವಸ್ತುಗಳನ್ನು ತೆಗೆದುಹಾಕಬೇಕು
6. ಹಿರಿಯ ನಾಗರಿಕರಿಗೆ ನಿವೃತ್ತಿ ಪಿಂಚಣಿ ಯೋಜನೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ
7. ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು

#WATCH | #DelhiElections2025 | Delhi: AAP National Convenor Arvind Kejriwal says, "... We demand that the next Budget of the country be dedicated to the middle class. Today, I am making 7 demands to the central government... 1st, the education budget should be increased to 10%… pic.twitter.com/Xg0AifPAL8