ಕಿರುತೆರೆಯ ʼದೊಡ್ಮನೆʼ ಅಂತಾನೇ ಕರೆಸಿಕೊಳ್ಳುವ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಫೈಟ್ ಮತ್ತಷ್ಟು ಜೋರಾಗಿದೆ.. ಸ್ಪರ್ಧಿಗಳ ಬಗ್ಗೆ ಕಾಮೆಂಟ್ ಮಾಡುತ್ತಾ ಸ್ವಿಮ್ಮಿಂಗ್‌ಪೂಲ್‌ಗೆ ತಳ್ಳುವ ಟಾಸ್ಕ್ ನೀಡಲಾಗಿದೆ.. ಪಕ್ಷಪಾತಿ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ಅಶಕ್ತರು ಯಾರು ಅನ್ನೋದನ್ನ ಸೂಚಿಸುವಂತೆ ಬಿಗ್‌ಬಾಸ್ ಟಾಸ್ಕ್ ನೀಡಿದೆ.. ಈ ನಿಟ್ಟಿನಲ್ಲಿ ಮನೆಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನ ಹೇಳಿಕೊಂಡಿದ್ದಾರೆ.. ಬಿಗ್‌ಬಾಸ್ ಮನೆಯಲ್ಲಿ ಪಕ್ಷಪಾತಿ ಯಾರು? ನಿರ್ಧಾರ ತೆಗೆದುಕೊಳ್ಳಲು ಅಶಕ್ತರು ಯಾರು? ಕೊಟ್ಟ ಮಾತುಗಳನ್ನ ಉಳಿಸಿಕೊಳ್ಳಲು ಅಶಕ್ತರು ಯಾರು? ಜನ ನಿರ್ವಹಣೆಯಲ್ಲಿ ಅಶಕ್ತರು ಯಾರು? ಅನ್ನೋದನ್ನ ಸ್ಪರ್ಧಿಗಳ ರಿವಿಲ್ ಮಾಡಿದ್ದಾರೆ..
ಬಿಗ್‌ಬಾಸ್ ನೀಡಿರುವ ಟಾಸ್ಕ್‌ನಂತೆಯೇ ಎಲ್ಲಾ ಸ್ಪರ್ಧಿಗಳು ಕೂಡ ಕಾರಣ ನೀಡಿದ್ದಾರೆ.. ಅಷ್ಟೇ ಅಲ್ಲ ರೀಸನ್ ನೀಡುತ್ತಲೇ, ಸ್ವಿಮ್ಮಿಂಗ್‌ಪೂಲ್‌ಗೆ ತಳ್ಳುವ ಟಾಸ್ಕ್‌ನಲ್ಲಿ ಚೈತ್ರಾ, ಗೌತಮಿ, ಉಗ್ರಂ ಮಂಜು, ಭವ್ಯಾಗೌಡ ಮೇಲೆ ಸ್ಪರ್ಧಿಗಳು ದೂರುಗಳ ಪಟ್ಟಿಯೇ ಹೇಳಿದ್ದಾರೆ..
ಒಬ್ಬೊಬ್ಬರು ಒಂದೊಂದು ರೀತಿಯ ರೀತಿಯ ಕಾರಣ ನೀಡಿದ್ದಾರೆ.. ಆದ್ರೆ ಇಂದು ಹೊರಬಿದ್ದಿರುವ ಬಿಗ್‌ಬಾಸ್ ಪ್ರೋಮೋದಲ್ಲಿ ಗೌತಮಿ ವರ್ಸಸ್ ಮೋಕಿತಾರನ್ನ ಹೈಲೆಟ್ ಮಾಡಲಾಗಿದೆ.. ಇಬ್ಬರ ನಡುವೆ ಇದ್ದ ಆರಂಭದ ಸ್ನೇಹ ಹೇಗೆ ಡಿವೈಡ್ ಆಗಿದೆ ಅಂತಾ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ.. ಇಬ್ಬರ ಮಧ್ಯೆಯೂ ಉಗ್ರಂ ಮಂಜು ಹೆಸರು ಓಡಾಡಿದೆ..
ಗೌತಮಿ ಬಗ್ಗೆ ಮೋಕ್ಷಿತಾ ತಮ್ಮ ಬೇಸರ ಹೊರಗೆ ಹಾಕಿದ್ದಾರೆ.. . ಒಂದು ವೇಳೆ ಮಂಜಣ್ಣನಿಗೆ ಏನಾದ್ರೂ ಆದ್ರೆ ಮುಗಿತು.. ಗೌತಮಿಗೆ ಸಿಕ್ಕಾಪಟ್ಟೆ ಫೀಲ್ ಆಗುತ್ತದೆ, ನನಗೆ ಏನೇ ಆದ್ರೂ ಅವರು ಯೋಚಿಸುತ್ತಿರಲಿಲ್ಲ ಅಂತಾ ಒಂದು ರೀತಿಯ ದೂರನ್ನ ಗೌತಮಿ ವಿರುದ್ಧ ಮೋಕ್ಷಿತಾ ಮಾಡಿದ್ದಾರೆ..
ಇನ್ನು ಮೋಕ್ಷಿತಾ ಮಾತಿಗೆ ಗೌತಮಿ ಕೂಡ ರಿಯಾಕ್ಟ್ ಮಾಡಿದ್ದಾರೆ. ಸ್ನೇಹವನ್ನ ನಾನು ಈಗಲೂ ನಿಭಾಯಿಸುತ್ತಿದ್ದೇನೆ, ನಿಮ್ಮ ತರ ನಾನು ಯೋಚನೆ ಮಾಡೋಕೆ ಆಗೋದಿಲ್ಲ. ಆದರೆ, ನಿಮ್ಮ ಈ ಒಂದು ಅಭಿಪ್ರಾಯವನ್ನ ನಾನು ತೆಗೆದುಕೊಳ್ಳುತ್ತೇನೆ ಅಂತಲೇ ಕೌಂಟರ್ ಕೊಟ್ಟಿದ್ದಾರೆ.. ಇದೇ ರೀತಿ ಮನೆಯ ಇತರ ಸದಸ್ಯರು ತಮ್ಮ ಅಭಿಪ್ರಾಯಗಳನ್ನ ಹೇಳಿಕೊಂಡು, ಆಯಾ ಸದಸ್ಯರನ್ನ ಈಜುಕೊಳಕ್ಕೆ ಜೋರಾಗಿಯೇ ತಳ್ಳಿದ್ದಾರೆ..