ಸ್ಪೆಷಲ್ ಸ್ಟೋರಿ

ಕನ್ನಡದ ಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ ತಿಂಗಳ ಆದಾಯ ಇಷ್ಟಂತೆ..

ಅತೀ ಸಣ್ಣ ವಯಸ್ಸಿನಲ್ಲಿ ವಿವಿಧ ದೇಶಗಳನ್ನು ಸುತ್ತುತ್ತಾ, ಕನ್ನಡ ಭಾವುಟಯನ್ನು, ಕನ್ನಡದ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಸಾರುತ್ತಿದ್ದಾರೆ ಡಾ. ಬ್ರೋ

ಯೂಟ್ಯೂಬ್ ಅನ್ನೋದು ಈಗ ಕೆಲವರಿಗೆ ಮಾಯಾಲೋಕವಾಗಿದೆ, ಯೂಟ್ಯೂಬ್ನಲ್ಲಿ ವೀಡಿಯೋ ಮಾಡ್ಕೊಂಡು ತಿಂಗಳಿಗೆ ನಮ್ಮ ಕನ್ನಡದವರೇ ಲಕ್ಷಾಂತರ ರೂಪಾಯಿ ರೊಕ್ಕ ಎಣಿಸುತ್ತಿದ್ದಾರೆ, ನಿಮಗಿದು ಗೊತ್ತಾ..? ನೀವು ಎಲ್ಲಾದ್ರು ಕೆಲಸ ಮಾಡಿದ್ರೆ ತಿಂಗಳ ಕೊನೆಗೋ ಅಥವಾ ತಿಂಗಳ ಆರಂಭಕ್ಕೂ ನಿಮಗೆ ಸಂಬಳ ಬರುತ್ತೆ, ಆದ್ರೆ ಯೂಟ್ಯೂಬ್ನಲ್ಲಿ ತಿಂಗಳ ಮಧ್ಯದಲ್ಲೇ ನೀವು ಎಷ್ಟು ದುಡಿದ್ದಿದ್ದೀರೋ ಅಷ್ಟೂ ಹಣ 21 ರಿಂದ 25ತಾರೀಕಿನ ಒಳಗೆ ನಿಮ್ಮ ಕೈ ಸೇರುತ್ತೆ..ಇದೇ ಕಾರಣಕ್ಕೆ ನೋಡಿ, ಸಿಕ್ಕ ಸಿಕ್ಕವರು ಇಂದು ಯೂಟ್ಯೂಬ್ಗೆ ಇಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರೋದು..
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಜನರು ವಿವಿಧ ರೀತಿಯ ಕಂಟೆಂಟ್ಗಳನ್ನು ಮಾಡುತ್ತಾರೆ, ಆದರೆ ಡಾ. ಬ್ರೋ ಒಂದೊಳ್ಳೆ ಕೆಲಸವನ್ನೆ ಮಾಡುತ್ತಿದ್ದಾರೆ. ಅತೀ ಸಣ್ಣ ವಯಸ್ಸಿನಲ್ಲಿ ವಿವಿಧ ದೇಶಗಳನ್ನು ಸುತ್ತುತ್ತಾ, ಕನ್ನಡ ಭಾವುಟಯನ್ನು, ಕನ್ನಡದ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಸಾರುತ್ತಿದ್ದಾರೆ. ಆದರೆ, ಎಲ್ಲರಿಗೂ ಇರುವ ಒಂದು ಅನುಮಾನವೇನೆಂದರೆ, ಡಾ. ಬ್ರೋ ಅವರಿಗೆ ಇಷ್ಟೆಲ್ಲಾ ದೇಶಗಳನ್ನು ಸುತ್ತಲು ದುಡ್ಡು ಎಲ್ಲಿಂದ ಬರುತ್ತೆ, ಅವರ ತಿಂಗಳ ಆದಾಯ ಎಷ್ಟು ಎಂಬುವುದು. ಒಂದು ದೇಶ ಸುತ್ತಿ ಅದರ ಕುರಿತು ಮಾಹಿತಿ ಕಲೆ ಹಾಕುವಲ್ಲಿಯೇ ನಾವು ಸುಸ್ತಾಗಿ ಹೋಗುತ್ತೇವೆ. ಅದರಲ್ಲೂ ಅಲ್ಲಿಗೆ ಒಬ್ಬಂಟಿಯಾಗಿ ಹೋಗಿ ಅಲ್ಲಾಗುವ ಖರ್ಚಂತೂ ಕಡಿಮೆ ಇರುವುದಿಲ್ಲ. ನಾವು ಏನ್ ಅಂದುಕೊಳ್ತೀವೋ ಅದಕ್ಕೆ ಜಾಸ್ತಿಯೇ ಖರ್ಚಾಗುತ್ತೆ ಆದರೆ, ಡಾ. ಬ್ರೋ ಅದೆಲ್ಲಾ ಯೋಚಿಸದೆ ತಮ್ಮ ಕೈಯಲ್ಲಿರುವ ಹಣದಲ್ಲಿ ದೇಶ ವಿದೇಶ ಸುತ್ತುತ್ತಾರೆ. ತಿಂಗಳಿಗೆ ಒಂದೆರೆಡು ದೇಶ ಸುತ್ತಿ, ಅಲ್ಲಿನ ಜನ ಆಹಾರ ಸಂಪ್ರದಾಯ ಇದೆಲ್ಲದರ ಕುರಿತು ತಮ್ಮ ಫಾಲೋವರ್ಸ್ಗೆ ಮಾಹಿತಿ ನೀಡುತ್ತಾರೆ, ಅಷ್ಟೆ ಅಲ್ಲ ಅವರು ಹೋದ ಜಾಗಗಳಲ್ಲಿ ಕನ್ನಡ ಮಾತನಾಡುತ್ತಾ, ಕನ್ನಡದ ಸಂಸ್ಕೃತಿಯನ್ನು ಸಾರುತ್ತಾ, ಕರುನಾಡಿಗೆ ಹೆಮ್ಮೆಯನ್ನು ತಂದು ಕೊಡುತ್ತಿದ್ದಾರೆ.
ಇದೀಗ ಅದೆಷ್ಟೋ ಜನ ಕಾತುರದಿಂದ ಕಾಯುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ, ಡಾ. ಬ್ರೋ ಅವರ ಒಂದು ತಿಂಗಳ ಇನ್ಕಮ್ ಎಷ್ಟು ಎಂಬುದನ್ನು ಅವರೇ ಇದೀಗ ರಿವೀಲ್ ಮಾಡಿದ್ದು, ಡಾ. ಬ್ರೋ ತಮಗೆ ತಿಂಗಳಿಗೆ 176000 ರೂ. ಬರುವುದಾಗಿ ಈ ಹಿಂದೆಯೇ ಹೇಳಿಕೊಂಡಿದ್ದಾರೆ..