ಸಿನಿಮಾ

ಸಾಯಿಬಾಬಾರ ಭಕ್ತಿಯಲ್ಲಿ ಮುಳುಗಿದ ಕತ್ರಿನಾ ಕೈಫ್..!

ಬಿಳಿ ಬಣ್ಣದ ಸಲ್ವಾರ್ ಸೂಟ್‌ನಲ್ಲಿ ಕತ್ರಿನಾ ಕಾಣಿಸಿಕೊಂಡಿದ್ದು ದೇವಸ್ಥಾನದಲ್ಲಿ ಭಕ್ತಿಯಿಂದ ಕೈ ಜೋಡಿಸಿದ್ದಾರೆ. ದರ್ಶನದ ನಂತರ ದೇಗುಲ ಮುಖ್ಯಸ್ಥ ವಿಷ್ಣು ಥೋರಟ್ ಮತ್ತು ಸಾಯಿಬಾಬಾ ಸಂಸ್ಥಾನದ ಆಡಳಿತ ಅಧಿಕಾರಿ ಪ್ರಜ್ಞಾ ಮಹಾಂದುಲೆ ಅವರನ್ನೂ ಕತ್ರಿನಾ ಭೇಟಿಯಾಗಿದ್ದಾರೆ.

ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್‌ ತಮ್ಮ ಕುಟುಂಬಸ್ಥರ ಜೊತೆ ಇತ್ತೀಚೆಗೆ ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿದ್ದಾರೆ. ಅತ್ತೆ ವೀಣಾ ಕೌಶಲ್ ಜೊತೆ ತೆರಳಿ ಶಿರಡಿಯ ಸಾಯಿಬಾಬಾ ದರ್ಶನ ಪಡೆದಿದ್ದು, ಈ ವೇಳೆ ಕತ್ರಿನಾ ಕೈಫ್‌ ಸರಳವಾಗಿಯೇ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಸಲ್ವಾರ್ ಸೂಟ್‌ನಲ್ಲಿ ಕತ್ರಿನಾ ಕಾಣಿಸಿಕೊಂಡಿದ್ದು ದೇವಸ್ಥಾನದಲ್ಲಿ ಭಕ್ತಿಯಿಂದ ಕೈ ಜೋಡಿಸಿದ್ದಾರೆ. ದರ್ಶನದ ನಂತರ ದೇಗುಲ ಮುಖ್ಯಸ್ಥ ವಿಷ್ಣು ಥೋರಟ್ ಮತ್ತು ಸಾಯಿಬಾಬಾ ಸಂಸ್ಥಾನದ ಆಡಳಿತ ಅಧಿಕಾರಿ ಪ್ರಜ್ಞಾ ಮಹಾಂದುಲೆ ಅವರನ್ನೂ ಕತ್ರಿನಾ ಭೇಟಿಯಾಗಿದ್ದಾರೆ.