ಮಂಡ್ಯ ಅಬಕಾರಿ ಇಲಾಖೆಯ ಲಂಚದ ಕರ್ಮಕಾಂಡ ಬಯಲಾಗಿದೆ.. ದಾಖಲೆ ಸರಿಯಾಗಿದ್ದರೂ ಲೈಸೆನ್ಸ್ ನೀಡಲು 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಪುನೀತ್ ಆರೋಪಿಸಿದ್ದಾರೆ.. ಆಡಿಯೋ, ವಿಡಿಯೋಗಳ ಸಮೇತ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ದ ಲೋಕಾಯುಕ್ತಗೆ ದೂರು ನೀಡಿದ್ದಾರೆ..
ಲಂಚ ಕೇಸ್ ಬಗ್ಗೆ ದೂರು ಕೊಟ್ಟರೆ ತನಿಖೆ
ಮಂಡ್ಯ ಅಬಕಾರಿ ಇಲಾಖೆ ಲಂಚ ಪ್ರಕರಣ ಸಂಬಂಧ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.. ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ, ನಮ್ಮ ಇಲಾಖೆಗೆ ದೂರು ಬಂದಿಲ್ಲ, ಕಂಪ್ಲೇಂಟ್ ಬಂದರೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.. ಆಡಿಯೋ, ವಿಡಿಯೋ ಇದೆ ಇನ್ನೇನು ಸಾಕ್ಷ್ಯ ಬೇಕು ಅಂತಾ ಅಶೋಕ್ ವಾಗ್ದಾಳಿ ನಡೆಸಿದ್ದಾರೆ..