ನಟ ಡಾರ್ಲಿಂಗ್ ಪ್ರಭಾಸ್ ಜೊತೆ ಸಿನಿಮಾ ಮಾಡೋದಾಗಿ ಘೋಷಿಸಿದ ಬೆನ್ನಲ್ಲೇ ಹೊಸ ಚಿತ್ರವೊಂದನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಕೆಲದಿನದ ಹಿಂದೆಯಷ್ಟೆ ಹೊಂಬಾಳೆ ಪ್ರೊಡಕ್ಷನ್ನಲ್ಲಿ ಹೊಸ ಪೋಸ್ಟರ್ ಅನ್ನ ಹೊಂಬಾಳೆ ತಂಡ ಬಿಡುಗಡೆ ಮಾಡಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿತ್ತು. ಇದೀಗ ‘ಮಹಾವತಾರ ನರಸಿಂಹ’ ಸಿನಿಮಾದ ಪೋಸ್ಟರ್ ಟೀಸರ್ ಅನ್ನು ಹೊಂಬಾಳೆ ಇಂದು ಸಂಸ್ಥೆ ರಿವೀಲ್ ಮಾಡಿದೆ.
ಇದು ಅನಿಮೇಷನ್ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ಭಾರತದ ಜನಪ್ರಿಯ ಅನಿಮೇಷನ್ ಸಿನಿಮಾ ಸ್ಟುಡಿಯೋ ಕ್ಲೀಮ್ ಸಹ ನಿರ್ಮಾಣ ಮಾಡುತ್ತಿದೆ. ಕ್ಲೀಮ್ನ ಅಶ್ವಿನ್ ಕುಮಾರ್ ಅವರು ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ.