ಬಿಗ್ ಮನೆಯಲ್ಲಿ ಈ ಬಾರಿ ರಾಜಸಾಮ್ರಾಜ್ಯ ಏರ್ಪಟ್ಟಿದೆ, ಈ ಸಾಮ್ರಾಜ್ಯಕ್ಕೆ ಉಗ್ರಂ ಮಂಜು ಮಹಾರಾಜ, ಉಳಿದವರು ಪ್ರಜೆಗಳಾಗಿದ್ದಾರೆ, ಮಂಜುಗೆ ಸಲಹೆಗಾರರಾಗಿ ಗೋಲ್ಡ್ ಸುರೇಶ್ ಇದ್ದಾರೆ, ಬಿಗ್ ಮನೆ ಅಂದ್ಮೇಲೆ ಅಲ್ಲಿ ಟ್ವಿಸ್ಟ್ಗಳು ಇರ್ಲೇ ಬೇಕಲ್ವಾ, ಇಲ್ಲ ಅಂದ್ರೆ ಬಿಗ್ ಬಾಸ್ ಬೋರ್ ಅದಕ್ಕಾಗೆ ಆಗಾಗ ಮನೆಯಲ್ಲಿ ಸ್ಪರ್ಧಿಗಳಿಗೆ ಸೀಕ್ರೆಟ್ ಟಾಸ್ಕ್ ಕೊಡೋದು..ರಾಜಸಾಮ್ರಾಜ್ಯದಲ್ಲಿ ಮಹಾರಾಜನಾಗಿರೋ ಉಗ್ರಂ ಮಂಜುಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್ ನೀಡಿದ್ರು, ಮನೆಯಲ್ಲಿರುವ ನಾಲ್ಕು ಸದಸ್ಯರನ್ನು ಆಯ್ದು ಅದ್ರಲ್ಲಿ ಇಬ್ಬರನ್ನು ಅವರಿಗೇ ಗೊತ್ತಾಲ್ಲದ ಹಾಗೆ ನಗಿಸಬೇಕು, ಇನ್ನಿಬ್ಬರನ್ನ ನೈಜವಾಗಿ ಅಳಿಸಬೇಕು ಈ ಟಾಸ್ಕ್ನಲ್ಲಿ ಯಶಸ್ವಿಯಾದ್ರೆ ಮುಂದಿನ ವಾರದ ಕ್ಯಾಪ್ಟನ್ಸಿ ಓಟದಲ್ಲಿ ಮಂಜು ಕೂಡಾ ಇರ್ತಾರೆ ಅಂತಾ ಬಿಗ್ ಬಾಸ್ ಹೇಳಿದ್ರು..
ಈ ಸೀಕ್ರೆಟ್ ಟಾಸ್ಕ್ನಲ್ಲಿ ಮಂಜು ಯಶಸ್ವಿಯೂ ಆಗಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ, ಹೌದು ಇಲ್ಲಿ ಮನೆಯಲ್ಲಿ ಶಿಶಿರ್ ಹಾಗೂ ಮೋಕ್ಷಿತಾ ರನ್ನ ಅಳುವಂತೆ ಮಾಡಿದ್ದಾರೆ ಮಂಜು, ಇದರ ಜೊತೆ ತ್ರಿವಿಕ್ರಮ್ ಹಾಗೂ ರಜತ್ ರನ್ನ ಅಳುವಂತೆ ಮಾಡಿದ್ದಾರೆ ಅನ್ನೋ ಸೋಮುವಾರದ ಎಪಿಸೋಡ್ನಲ್ಲಿ ಎದ್ದು ಕಾಣ್ತಿದೆ..ಹಾಗಾದ್ರೆ ಮುಂದಿನ ವಾರವೂ ಮಂಜು ಕ್ಯಾಪ್ಟನ್ಸಿ ಓಟಾದಲ್ಲಿ ಇರ್ತಾರಾ..? ಕಾದು ನೋಡಬೇಕಿದೆ..