ಬೆಂಗಳೂರಿನಲ್ಲಿ ಹೈಟೆಕ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿ ಮೇಲೆ ಗೂಂಡಾಕಾಯ್ದೆ ಹಾಕಲಾಗಿದೆ. ಆರೋಪಿ ಅನಿಲ್ ವಿರುದ್ದ ರೇಪ್ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು ಹೀಗಾಗಿ ಮಹದೇವಪುರ ಪೊಲೀಸರು ಅನಿಲ್ ರೆಡ್ಡಿ ವಿರುದ್ದ ಗೂಂಡಾ ಕಾಯ್ದೆ ರಿಪೋರ್ಟ್ ತಯಾರಿಸಿದ್ದರು. ಕೆ.ಆರ್. ಪುರದ ಟಿನ್‌ಫ್ಯಾಕ್ಟರಿ ಬಳಿ ನಿರ್ವಣ ಇಂಟರ್‌ನ್ಯಾಷನಲ್ ಸ್ಪಾ ತೆಗೆಯಲಾಗಿತ್ತು. ಬೆಂಗಳೂರಿನಲ್ಲಿ ಕೆಲಸ ಕೊಡುವ ನೆಪದಲ್ಲಿ ಥ್ಯಾಲ್ಯಾಂಡ್, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಿಂದ ಹುಡುಗಿಯರು, ಮಹಿಳೆಯರಿಗೆ ಆರೋಪಿ ಗಾಳ ಹಾಕುತ್ತಿದ್ದ ಆರೋಪವಿದೆ. ರೇಪ್ ಸೇರಿ ವಿವಿಧ ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆ ವರದಿ ಆಧರಿಸಿ ಅನಿಲ್ ರೆಡ್ಡಿ ವಿರುದ್ದ ಗೂಂಡಾಕಾಯ್ದೆ ಜಾರಿಗೆ ಪೊಲೀಸ್ ಕಮಿಷನರ್ ಬಿ. ದಯಾನಂದ್ ಆದೇಶಿಸಿದ್ದಾರೆ.