ವೈಯ್ಯಾಲಿಕಾವಲ್ ಮಗು ನಾಪತ್ತೆ ಪ್ರಕರಣ, ನಾಪತ್ತೆಯಾಗಿದ್ದ ಮಗು ಪಾರ್ಕ್ ಬಳಿ ಪತ್ತೆಯಾಗಿದೆ. ವೈಯ್ಯಾಲಿಕಾವಲ್ ಬಳಿಯ ದೇವಯ್ಯಪಾರ್ಕ್ ಬಳಿ ಮಗು ಪತ್ತೆಯಾಗಿದೆ. ಸದ್ಯ ಮಗುವನ್ನ ರಕ್ಷಿಸಿರುವ ವೈಯ್ಯಾಲಿಕಾವಲ್ ಪೊಲೀಸರು ಪೋಷಕರಿಗೆ ನೀಡಿದ್ದಾರೆ.
ಮಗುವನ್ನ ಸುಜಾತ ಎಂಬ ಮಹಿಳೆ ಕರೆದೊಯ್ದಿದ್ದು, ಮಗುವನ್ನ ಕರೆದೊಯ್ದಿದ್ದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗ್ತಿದೆ. ಸದ್ಯ ಸುಜಾತಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನ ನಡೆಸುತ್ತಿದ್ದಾರೆ.