ಸಿನಿಮಾ

ಮೋಸ್ಟ್ ಅವೈಟೆಡ್ ಸಿನಿಮಾ ಯುಐ ಇಂದು ವಿಶ್ವದಾದ್ಯಂತ ರಿಲೀಸ್..! ಮತ್ತೆ ಶುರುವಾಯ್ತು ಉಪ್ಪಿ ಹವಾ

ಸಪ್ತ ಸಾಗರದಾಚೆಗೂ ಯುಐ ಹವಾ ಜೋರಾಗಿದ್ದು, ಅರಬ್ ಕಂಟ್ರೀಸ್, ಕೆನಡಾ, ಅಮೆರಿಕಾ, ದುಬೈ ಮುಂತಾದ ಕಡೆಗಳಲ್ಲಿ ಯುಐ ಕ್ರೇಜ್ ಹೆಚ್ಚಾಗಿದೆ. ಇನ್ನೂ ಚಿತ್ರದಲ್ಲಿ ಉಪೇಂದ್ರಾಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಉಪ್ಪಿ ಇನ್ಜೊತೆ ತೆರೆ ಹಂಚಿಕೊಂಡಿದ್ದಾರೆ

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ಮೋಸ್ಟ್ ಅವೈಟೆಡ್ ಸಿನಿಮಾ ಯುಐ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಉಪ್ಪಿ-2 ಸಿನಿಮಾ ನಂತರ 9 ವರ್ಷಗಳ ಬಳಿಕ ಉಪೇಂದ್ರ ಯುಐ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಯುಐ ಸಿನಿಮಾ ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. 

ಐದು ಭಾಷೆಯಲ್ಲಿ ಇಂದು ಯುಐ ಸಿನಿಮ ತೆರೆಗಪ್ಪಳಿಸಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಯುಐ ಅಬ್ಬರ ಜೋರಾಗಿದೆ. ಸಪ್ತ ಸಾಗರದಾಚೆಗೂ ಯುಐ ಹವಾ ಜೋರಾಗಿದ್ದು, ಅರಬ್ ಕಂಟ್ರೀಸ್, ಕೆನಡಾ, ಅಮೆರಿಕಾ, ದುಬೈ ಮುಂತಾದ ಕಡೆಗಳಲ್ಲಿ ಯುಐ ಕ್ರೇಜ್ ಹೆಚ್ಚಾಗಿದೆ. ಇನ್ನೂ ಚಿತ್ರದಲ್ಲಿ ಉಪೇಂದ್ರಾಗೆ ನಾಯಕಿಯಾಗಿ  ರೀಷ್ಮಾ ನಾಣಯ್ಯ ಉಪ್ಪಿ  ಇನ್ಜೊತೆ ತೆರೆ ಹಂಚಿಕೊಂಡಿದ್ದಾರೆ