ವಿದೇಶ

ಆಸ್ಟ್ರೇಲಿಯಾದಲ್ಲಿ ಹೊಸ ಮಸೂದೆ ಜಾರಿ, 16 ವರ್ಷದ ಮಕ್ಕಳೇ ಇಲ್ಲಿ ನೋಡಿ..

ಮೆಲ್ಬರ್ನ್‌: 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಕೆಗೆ ನಿಷೇಧ ವಿಧಿಸುವ ಮಸೂದೆಯನ್ನು ಆಸ್ಟ್ರೇಲಿಯಾ ಅಂಗೀಕರಿಸಿದೆ.

ಸ್ನೇಹಿತರೇ ಹೇಳಿ ಕೇಳಿ ಆಸ್ಟ್ರೇಲಿಯಾ ದೇಶ ಕ್ರೀಡೆಗಳಿಗೆ ಹೆಚ್ಚಾಗಿ ಪ್ರೋತ್ಸಾಹ ನೀಡುತ್ತೆ, ಅದಕ್ಕೆ ನೋಡಿ ಆಸ್ಟ್ರೇಲಿಯಾ ಯಾವುದೇ ಕ್ರೀಡೆಗಳಾಗಲಿ ಅದರಲ್ಲಿ ಟಫ್‌ಫೈಟ್‌ಕೊಡೋದು, ಆದ್ರೆ ಇತ್ತೀಚಿಗಿನ ದಿನಗಳಲ್ಲಿ ಯುವ ಸಮೂಹ ಹೆಚ್ಚಾಗಿ ಮೊಬೈಲ್‌ಗೀಳಿಗೆ ಒಳಗಾಗುತ್ತಿರುವುದನ್ನ ಮನಗಂಡ ಆಸ್ಟ್ರೇಲಿಯಾ ಸರ್ಕಾರ, ಮಹತ್ತರ ನಿರ್ಧಾರವನ್ನ ಮಾಡಿದೆ, ಅದು 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಕೆಗೆ ನಿಷೇಧ ವಿಧಿಸಿರೋದು 
ಮಸೂದೆಯನ್ನು ಉಭಯಪಕ್ಷೀಯ ಬೆಂಬಲದೊಂದಿಗೆ ಎರಡೂ ಸಂಸದೀಯ ಸದನಗಳು ಅಂಗೀಕರಿಸಿವೆ. ಹದಿಹರೆಯದವರು ಖಾತೆಗಳನ್ನು ಹೊಂದುವುದನ್ನು ತಡೆಯಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಶೀಘ್ರದಲ್ಲೇ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಿಯಮವನ್ನು ಅನುಸರಿಸಲು ವಿಫಲವಾದಲ್ಲಿ 274 ಕೋಟಿ ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೊಸ ನಿಯಮ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಹಿಂದೆ ಬರಲು ಆಸ್ಟ್ರೇಲಿಯಾ ಪೋಷಕರನ್ನು ಒಟ್ಟುಗೂಡಿಸಿದ್ದಾರೆ. 
ಯುವ ಆಸ್ಟ್ರೇಲಿಯನ್ನರು ತಮ್ಮ ಫೋನ್‌ಗಳಿಂದ ದೂರವಿರಿ. ಈಜುಕೊಳದಲ್ಲಿ ಈಜಾಡಿ, ಕ್ರಿಕೆಟ್ ಮೈದಾನ, ಟೆನಿಸ್ ಮತ್ತು ನೆಟ್‌ಬಾಲ್ ಅಂಕಣಗಳಲ್ಲಿ ಆಟವಾಡಿ ಎಂದು ಕರೆ ನೀಡಿದ್ದಾರೆ.