ಪಂಚಮಸಾಲಿ ಮೀಸಲಾತಿ ಕೂಗು ಹೋರಾಟದ ಸ್ವರೂಪ ಪಡೆದುಕೊಂಡಿದೆ. ಮೊನ್ನೆ ಹೋರಾಟದ ವೇಳೆ ಹಲವು ಪಂಚಮಸಾಲಿ ಮುಖಂಡರ ಮೇಲೆ ಲಾಠಿ ಪ್ರಹಾರವಾಗಿದ್ದು, ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಇದರ ಬಗ್ಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಮ್ಮ ಜನ ಇಷ್ಟಕ್ಕೇ ಸುಮ್ಮನಾಗಲ್ಲ ಮತ್ತಷ್ಟು ಪುಟಿದೇಳುತ್ತಾರೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಇಷ್ಟುದಿನ ಶಾಂತಿಯುತ ಹೋರಾಟ ಮಾತ್ರ ಮಾಡುತ್ತಿದ್ದೆವು. ಆದ್ರೆ ಇನ್ಮುಂದೆ ಹಾಗೆಲ್ಲ ಇರಲ್ಲ. ಹಳ್ಳಿ ಹಳ್ಳಿಗಳಿಗೂ ಹೋಗಿ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.