ಸಿನಿಮಾ

ಜೈಲಿಂದ ಬರ್ತಿದ್ದಂತೆ ಪವಿತ್ರಾಗೌಡ ಟೆಂಪಲ್‌ ರನ್‌.. ದರ್ಶನ್‌ ಹೆಸರಲ್ಲಿ ಪೂಜೆ..!

ವೇಳೆ ಅಚ್ಚರಿ ಎನ್ನುವಂತೆ ಅರ್ಚನೆ ಸಮಯದಲ್ಲಿ ಪವಿತ್ರಾಗೌಡ ತಾಯಿ ಭಾಗ್ಯಮ್ಮ,, ದರ್ಶನ್‌ ಹೆಸರಿನಲ್ಲಿ ಪೂಜೆ ಮಾಡಿಸಿದ್ದಾರೆ.. ಜೈಲಿಂದ ಬಂದ ಬಳಿಕ ದೇವರ ದರ್ಶನ ನಂತರ ಕುಟುಂಬಸ್ಥರ ಜೊತೆ ಪವಿತ್ರಾಗೌಡ ತಮ್ಮ ತಾಯಿಯ ನಿವಾಸಕ್ಕೆ ತೆರಳಿದ್ದಾರೆ..

ಬೆಂಗಳೂರಿನ ಕಾರಾಗೃಹದಿಂದ ಹೊರ ಬರ್ತಿದ್ದಂತೆ ಪವಿತ್ರಾಗೌಡ ಟೆಂಪಲ್‌ರನ್‌ ಮಾಡಿದ್ದಾರೆ.. ಸೆಂಟ್ರಲ್‌ ಜೈಲಿನಿಂದ ಬರ್ತಿದ್ದಂತೆ ನಗರದ ತಲಘಟ್ಟಪುರದ  ವಜ್ರಮುನೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದಾರೆ.. ತಾಯಿ ಭಾಗ್ಯಮ್ಮ ಜೊತೆ ದೇವಸ್ಥಾನಕ್ಕೆ ತೆರಳಿದ್ದು, ದೇಗುಲ ಆವರಣದಲ್ಲಿಯೇ ತೀರ್ಥಸ್ನಾನ ಮಾಡಿ ಹಣೆಗೆ ವಿಭೂತಿ ಹಚ್ಚಿಕೊಂಡು, ಕೈಯಲ್ಲಿ ಅಗರಬತ್ತಿ ಹಿಡಿದು ಪವಿತ್ರಾಗೌಡ ಪ್ರದಕ್ಷಿಣೆ ಹಾಕಿದ್ದಾರೆ.. ಪವಿತ್ರಾಗೌಡ ದೇವರ ದರ್ಶನ ಬಳಿಕ ಕುಟುಂಬಸ್ಥರು,, ದೃಷ್ಟಿ ನಿವಾರಣೆ ಮಾಡಿದ್ದಾರೆ.. ಇದೇ ವೇಳೆ ಅಚ್ಚರಿ ಎನ್ನುವಂತೆ ಅರ್ಚನೆ ಸಮಯದಲ್ಲಿ ಪವಿತ್ರಾಗೌಡ ತಾಯಿ ಭಾಗ್ಯಮ್ಮ,, ದರ್ಶನ್‌ ಹೆಸರಿನಲ್ಲಿ ಪೂಜೆ ಮಾಡಿಸಿದ್ದಾರೆ.. ಜೈಲಿಂದ ಬಂದ ಬಳಿಕ ದೇವರ ದರ್ಶನ ನಂತರ ಕುಟುಂಬಸ್ಥರ ಜೊತೆ ಪವಿತ್ರಾಗೌಡ ತಮ್ಮ ತಾಯಿಯ ನಿವಾಸಕ್ಕೆ ತೆರಳಿದ್ದಾರೆ..