ದೇಶ

ನಾನೂ ಯಾರನ್ನೂ ತಳ್ಳಿಲ್ಲ, ಎಲ್ಲವೂ ಆಕಸ್ಮಿಕ ಘಟನೆ - ರಾಹುಲ್‌ ಗಾಂಧಿ

ಸಂಸತ್‌ನಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರನ್ನ ತಳ್ಳಿದ್ದಾರೆ ಎನ್ನುವ ತಮ್ಮ ಮೇಲಿನ ಆರೋಪಕ್ಕೆ ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ..

ಸಂಸತ್‌ನಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರನ್ನ ತಳ್ಳಿದ್ದಾರೆ ಎನ್ನುವ ತಮ್ಮ ಮೇಲಿನ ಆರೋಪಕ್ಕೆ ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.. ನಾನು ಸಂಸತ್ತಿನ ಪ್ರವೇಶದ್ವಾರದ ಮೂಲಕ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ, ಬಿಜೆಪಿ ಸಂಸದರು ನನ್ನನ್ನು ತಡೆಯಲು, ತಳ್ಳಲು ಮತ್ತು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದರು ಅಂತಾ ಆರೋಪಿಸಿದ್ದಾರೆ.. ಆಡಳಿತ ಮತ್ತು ವಿಪಕ್ಷ ನಾಯಕರ ಮುಖಾಮುಖಿ ವೇಳೆ ಗದ್ದಲ ಉಂಟಾಗಿ ಈ ರೀತಿ ಆಗಿದೆ ಅಷ್ಟೇ.. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ತಳ್ಳಲಾಗುತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಸಂಸತ್‌ ಒಳಗೆ ನಮಗೂ ಹೋಗುವ ಹಕ್ಕಿದೆ.. ಬಿಜೆಪಿ ಸಂಸದರು ನಮ್ಮನ್ನು ಒಳಗೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದ್ದರು... ಅವರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅಂಬೇಡ್ಕರ್ ಅವರ ಸ್ಮರಣೆಯನ್ನು ಅವಮಾನಿಸುತ್ತಿದ್ದಾರೆ ಮುಖ್ಯವಾದ ವಿಷಯ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ..

#WATCH | Lok Sabha LoP Rahul Gandhi says, "This might be on your camera. I was trying to go inside through the Parliament entrance, BJP MPs were trying to stop me, push me and threaten me. So this happened...Yes, this has happened (Mallikarjun Kharge being pushed). But we do not… https://t.co/q1RSr2BWqu pic.twitter.com/ZKDWbIY6D6