ದೇಶ

ಪರ-ವಿರೋಧ ಪ್ರೊಟೆಸ್ಟ್‌.. ಬಿಜೆಪಿ ಸಂಸದನ ತಳ್ಳಿದ್ರಾ ರಾಹುಲ್‌ ಗಾಂಧಿ?

ಅಂಬೇಡ್ಕರ್‌ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ವಾಕ್ಸಮರ ಮುಂದುವರಿದಿದೆ.. ಕೇಂದ್ರ ಸಚಿವ ಅಮಿತ್‌ ಶಾ ಅವರು ಅಂಬೇಡ್ಕರ್‌ ಕುರಿತು ನೀಡಿದ್ದಾರೆ ಅನ್ನಲಾದ ಹೇಳಿಕೆ ಕುರಿತು ಪ್ರತಿಭಟನೆ ನಡೆಯುತ್ತಿದೆ..

ಅಂಬೇಡ್ಕರ್‌ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ವಾಕ್ಸಮರ ಮುಂದುವರಿದಿದೆ.. ಕೇಂದ್ರ ಸಚಿವ ಅಮಿತ್‌ ಶಾ ಅವರು ಅಂಬೇಡ್ಕರ್‌ ಕುರಿತು ನೀಡಿದ್ದಾರೆ ಅನ್ನಲಾದ ಹೇಳಿಕೆ ಕುರಿತು ಪ್ರತಿಭಟನೆ ನಡೆಯುತ್ತಿದೆ.. ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಂಬೇಡ್ಕರ್ ವಿಷಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಗದ್ದಲ ಉಂಟಾಗಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ತಲೆಗೆ ಗಾಯವಾಗಿದೆ.. ಸಂಸತ್ತಿನ ಮಕರ ದ್ವಾರದ ಮುಂದೆ ಪ್ರತಿಭಟನಾನಿರತ ವಿಪಕ್ಷಗಳು ಮತ್ತು ಬಿಜೆಪಿ ಸಂಸದರು ಮುಖಾಮುಖಿಯಾದಾಗ ಗದ್ದಲ ಉಂಟಾಗಿದೆ. ಕಾಂಗ್ರೆಸ್‌ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ,, ನನ್ನನ್ನು ತಳ್ಳಿದ್ದರಿಂದ ಕೆಳಗೆ ಬಿದ್ದು ಗಾಯವಾಗಿದೆ ಎಂದು ಸಾರಂಗಿ ಆರೋಪಿಸಿದ್ದಾರೆ.. ಈ ಬಗ್ಗೆ ರಾಹುಲ್‌ ಗಾಂಧಿ ಕೂಡ ಪ್ರತಿಕ್ರಿಯೆ ನೀಡಿದ್ದು ಏನೇ ಆಗಿದ್ದರೂ ಅದು ಆಕಸ್ಮಿಕ ಘಟನ ಅಷ್ಟೇ ಉದ್ದೇಶಪೂರಕವಾಗಿ ಏನೂ ನಡೆದಿಲ್ಲ ಎಂದಿದ್ದಾರೆ..