ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಅಟ್ಟಹಾಸ ಜೋರಾಗಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್, ದಿನ ಒಂದಲ್ಲಾ ಒಂದು ಖ್ಯಾತೆಯನ್ನ ತೆಗೆಯುತ್ತಲೇ ಇರುತ್ತಾರೆ. ನಿಮ್ಮ ಮಾತಿನ ಮೇಲೆ ನಿಗಾ ವಹಿಸಿ ಎಂದು ವಾರದ ಕತೆಯಲ್ಲಿ ಕಿಚ್ಚಾ ಸುದೀಪ್ ಎಚ್ಚರಿಸಿದ್ದರು. ಆದ್ರೂ ಎಲುಬಿಲ್ಲದ ನಾಲಿಗೆಯನ್ನ ರಜತ್ ಆಗಾಗ ಹರಿಬಿಡ್ತಾನೆ ಇರುತ್ತಾರೆ. ಸದ್ಯ ರಜತ್ ಈ ವಾರ ನಾಮಿನೇಷನ್ ಆಗಿದ್ದು, ಮತ್ತೆ ಡೈಲಾಗ್ ಮೇಲೆ ಡೈಲಾಗ್ ಹೊಡೆದಿದ್ದಾರೆ.