ಬಿಗ್‌ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ರಜತ್ ಆರ್ಭಟ ಹೆಚ್ಚಾಗಿದೆ. ನಿನ್ನೆ ಗೌತಮಿ ಜೊತೆ ಟಾಕ್‌ಫೈಟ್‌ನಲ್ಲಿ ಮುಳುಗಿದ್ದ ರಜತ್ ಇದೀಗ ಕಿರುತೆರೆಯ ದೊಡ್ಮನೆಯಲ್ಲಿ ಮತ್ತೆ ಕೆಂಡಾಮಂಡಲಾಗಿದ್ದಾರೆ. ಮಾತಿನ ಮೇಲೆ ಗಮನ ಇರಲಿ ಎಂದು ಸುದೀಪ್ ಹೇಳಿದ್ದರೂ ರಜತ್ ಬದಲಾದಂತೆ ಕಾಣ್ತಿಲ್ಲ. ಏಕವಚನದಲ್ಲಿಯೇ ಮಾತನಾಡ್ತಾ ಎಲ್ಲರ ಮೇಲೆಯೂ ಎಗರಿ ಬಿದ್ದಿದ್ದಾರೆ.. ನಾನೇ ಹೀರೋ, ನಾನು ಫುಲ್ ಕರಾಬು ಎಂದು ಅಬ್ಬರಿಸಿದ್ದಾರೆ.
ಬಿಗ್‌ಬಾಸ್ ಎಪಿಸೋಡ್‌ನ ಇಂದಿನ ಪ್ರೋಮೋ ಹೊರಬಿದ್ದಿದೆ. ಸ್ಪರ್ಧಿಗಳಿಗೆ ಬಿಗ್‌ಬಾಸ್,, ಟಾಸ್ಕ್‌ವೊಂದನ್ನ ನೀಡಿದ್ದಾರೆ. ಹಗ್ಗದಲ್ಲಿನ ಬಣ್ಣದ ಪ್ರಕಾರ ಕೋಲು ಜೋಡಿಸುವಂತೆ ಸೂಚಿಸಲಾಗಿದೆ. ಟಾಸ್ಕ್ ಕಂಪ್ಲೀಟ್ ಬಳಿಕ ಸ್ಪರ್ಧಿಗಳು ತಮ್ಮೊಳಗೆ ಚರ್ಚಿಸಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಲು ಹೇಳಲಾಗಿತ್ತು.. ಆದ್ರೆ ಈ ವೇಳೆ ತ್ರಿವಿಕ್ರಮ್ ತಂಡ ನೇರವಾಗಿ ರಜತ್ ಅವರನ್ನು ನಾಮಿನೇಟ್ ಮಾಡಿದೆ.
ಬಿಗ್‌ಬಾಸ್ ಮನೆಯಲ್ಲಿ ಎಲ್ಲರನ್ನು ವೈಯಕ್ತಿಕವಾಗಿ ಆಡಿ ಎಂದು ಪ್ರವೋಕ್ ಮಾಡುತ್ತಾರೆ.. ಅವರನ್ನೇ ಅವರು ಮೇಲು ಅಂದುಕೊಂಡಿದ್ದಾರೆ ಎಂದು ತ್ರಿವಿಕ್ರಮ್ ಕಾರಣ ಕೊಟ್ಟಿದ್ದಾರೆ.. ಇದಕ್ಕೆ ರಜತ್ ಕೆರಳಿಕೆಂಡವಾಗಿದ್ದಾರೆ. ನಾಮಿನೆಟ್ ಮಾಡಿದ್ದಕ್ಕೆ ಸಿಟ್ಟಾಗಿದ್ದು, ನಾನೇ ಹೀರೋ, ನಾನೇ ಕರಾಬು, ನಾಮಿನೇಟ್ ಮಾಡಿ ಬಿಟ್ರೆ ಚೇಂಜ್ ಆಗ್ತೀನಾ ನಾನು? ಬೇರೆಯವರನಾ ಹೀರೋ ಅಂತಿನಾ? ನಾನೇ ಹೀರೋ ಎಂದು ಅಬ್ಬರಿಸಿದ್ದಾರೆ.. ರಜತ್ ಅಬ್ಬರ ಕಂಡು ದೊಡ್ಮನೆ ಮಂದಿಯೂ ಶಾಕ್ ಆಗಿದ್ದಾರೆ.