ನಮ್ಮ ಭಾರತ ಆಯುರ್ವೇದಕ್ಕೆ ಹೆಸರುವಾಸಿಯಾಗಿದೆ. ಭಾರತೀಯರ ಪ್ರತಿ ಮನೆಯ ಹಿತ್ತಲಲ್ಲೂ ನೂರೊಂದು ಗಿಡಮೂಲಿಕೆಗಳಿರುತ್ತವೆ. ನಮ್ಮ ಮನೆಯಲ್ಲಿರುವ ಪ್ರತಿ ಸಸ್ಯದ ಕಣಕಣವೂ ಕೂಡ ಔಷಧಿಯ ಗುಣಗಳನ್ನ ಹೊಂದಿರುತ್ತದೆ. ಅಂತಹ ಸಸ್ಯಗಳಲ್ಲಿ ರಣಕಳ್ಳಿ ಕೂಡ ಒಂದು.
ರಸಕಳ್ಳಿ ಒಂದು ನಿತ್ಯಹರಿದ್ವರ್ಣ ಸಸ್ಯವಾಗಿದ್ದು, ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನ ಕರಗಿಸುತ್ತದೆ. ಬಹಳ ಅಪರೂಪ ರಣಕಳ್ಳಿ ದೇಹದಲ್ಲಿನ ಊತ ಹಾಗೂ ನೋವು ಎರಡನ್ನೂ ನಿವಾರಿಸುತ್ತದೆ. ಈ ಎಲೆಗಳು ಹುಳಿ ಮತ್ತು ಖಾರದ ರುಚಿಯನ್ನ ಹೊಂದಿದ್ದು, ಕರುಳಿಗೆ ಸಂಬಂಧಿಸಿದ ಅನೇಕ ರೋಗಗಳಿಗೆ ಇದು ರಾಮಬಾಣ.
ಇನ್ನೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನೂ ಬಾಧಿಸುವ ಸಮಸ್ಯೆಯೆಂದರೆ ಅದು ಮೂತ್ರಪಿಂಡದಲ್ಲಿನ ಕಲ್ಲು. ಆದ್ರೆ ರಣಕಳ್ಳಿ ಈ ಕಾಯಿಲೆಗೆ ಹೇಳಿ ಮಾಡಿಸಿದ ಔಷಧಿಯಾಗಿದೆ. ಮೂತ್ರಪಿಂಡದೊಳಗೆ ಎಂತಹದ್ದೇ ಕಲ್ಲುಗಳಿದ್ದರೂ ಕೂಡ ಅದನ್ನ ತುಂಡುತುಂಡಾಗಿ ಒಡೆದು ದೇಹದಿಂದ ತೆಗೆದುಹಾಕುವ ಸಾಮರ್ಥ್ಯವನ್ನ ಹೊಂದಿದೆ.
ರಣಕಳ್ಳಿ ಸೇವಿಸುವುದು ಹೇಗೆ?
ರಸಕಳ್ಳಿಯನ್ನ ಉಪಯೋಗಿಸುವುದು ತುಂಬಾ ಸುಲಭ. ಪ್ರತಿನಿತ್ಯ ಎರಡು ಎಲೆಗಳನ್ನ ಜಗಿದು ಒಂದು ಲೋಟ ಉಗುರುಬೆಚ್ಚಗಿನ ನೀರನ್ನ ಕುಡಿಯಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಚಮತ್ಕಾರಿ ಪ್ರಯೋಜನವನ್ನ ಕಾಣಬಹುದು. ಈ ಎಲೆಯನ್ನ ಒಂದೆರೆಡು ಕರಿಮೆಣಸಿನ ಕಾಳುಗಳ ಜೊತೆ ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಮೂತ್ರಪಿಂಡವೂ ಕಲ್ಮಷಗಳಿಲ್ಲದೆ ಆರೋಗ್ಯವಾಗಿರುತ್ತದೆ.