ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಅನರ್ಹ ವಿಚಾರ ಬೆಂಗಳೂರಿನಲ್ಲಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಸಿದ್ದಾರೆ. ರೇಷನ್ ಕಾರ್ಡ್ ಬಡವರದ್ದು ಕಟ್ ಆಗಲ್ಲ. ಬಡವರಿಗೆ ಸಿಗದಿದ್ರೆ ಕೊಡುವ ಕೆಲಸ ಆಗುತ್ತೆ. ಇಡೀ ರಾಷ್ಟ್ರದಲ್ಲಿ ಅತಿ ಹೆಚ್ಚು ರೇಷನ್ ಕಾರ್ಡ್ ಇರುವುದು ನಮ್ಮ ರಾಜ್ಯದಲ್ಲಿಯೇ. ಬೇರೆ ರಾಜ್ಯಗಳಲ್ಲಿ ೪೦% ಮಾತ್ರ ಕಾರ್ಡು ಗಳಿದ್ದರೆ ನಮ್ಮಲ್ಲಿ ೮೦% ಕಾರ್ಡ್ ಗಳಿವೆ.ಯಾರು ತೆರಿಗೆ ಕಟ್ಟುತ್ತಾರೆ ಅವರ ಕಾರ್ಡ್ ಕಟ್ ಆಗುತ್ತೆ.
ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಎಂ ಬಿ ಪಾಟೀಲ್ ಗೆ ರೇಷನ್ ಕಾರ್ಡ್ ಯಾಕೆ ಬೇಕು? ನಾನು ತೆರಿಗೆ ಕಟ್ಟುತ್ತೇನೆ. ನನಗೆ ಬಿಪಿಎಲ್ ಕಾರ್ಡ್ ಇದ್ದರೆ ಅದು ಅನರ್ಹ ಆಗಬೇಕಲ್ವಾ? ಇಂತಹ ಕಾರ್ಡ್ ಕಟ್ ಮಾಡಬೇಕಲ್ವಾ? ಅಂತಾ ಪ್ರಶ್ನಿಸಿದ್ದಾರೆ. ಅರ್ಹ ಇರುವವರಿಗೆ ರೇಷನ್ ಕಾರ್ಡ್ ಕೊಡಿಸುವ ಕೆಲಸ ಮಾಡುತ್ತೇವೆ.ರೇಷನ್ ಕಾರ್ಡ್ ತಿದ್ದುಪಡಿಗೂ ಗ್ಯಾರಂಟಿಗೂ ಸಂಬಂಧ ಇಲ್ಲ ಅಂತ ಹೇಳಿದ್ದಾರೆ.