ದೇಶ

IAS vs IPS: ಮತ್ತೆ ಸುಪ್ರೀಂ ಕೋರ್ಟ್ ನಿಂದ ಹೈಕೋರ್ಟ್ ಅಂಗಳಕ್ಕೆ ರೂಪಾ-ರೋಹಿಣಿ ಕೇಸ್..!

ಕಳೆದ ವರ್ಷ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರದ್ದೆನ್ನಲಾದ ಕೆಲವು ಅಶ್ಲೀಲವೆನಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೆಟ್ಟ ಆರೋಪಗಳನ್ನು

ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಜಗಳ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಂಡು ಬರುತ್ತಿಲ್ಲ. ಸುಪ್ರೀಂ ಕೋರ್ಟ್ನಲ್ಲಿಯೂ ಇಬ್ಬರು ಜಗಳ ಬಗೆಹರಿದಿಲ್ಲ. ಹೀಗಾಗಿ ನೀವು ಇನ್ನು ಇಲ್ಲಿ ಬರುವುದು ಬೇಡ. ಪುನಃ ಹೈಕೋರ್ಟ್ಗೆ ಹೋಗಿ ಅಲ್ಲಿಯೇ ನ್ಯಾಯ ಪಂಚಾಯಿತಿ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ವಾಪಸ್ ಕಳುಹಿಸಿದೆ.

ಕಳೆದ ವರ್ಷ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರದ್ದೆನ್ನಲಾದ ಕೆಲವು ಅಶ್ಲೀಲವೆನಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೆಟ್ಟ ಆರೋಪಗಳನ್ನು ಮಾಡಿದ್ದರು. ಹೀಗಾಗಿ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲೇರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಸರ್ಕಾರದ ಮಟ್ಟದಲ್ಲಿ ಇಬ್ಬರ ಜಗಳವನ್ನು ನಿಲ್ಲಿಸಲು ಪ್ರಯತ್ನ ಮಾಡಲಾಯಿತಾದರೂ ಇಬ್ಬರೂ ರಾಜಿಗೆ ತರಾರಿರಲಿಲ್ಲ. ವಿವಾದ ಹೈಕೋರ್ಟ್ ಮೆಟ್ಟಿಲೇರಿತು. ಅಲ್ಲಿ ಅಧಿಕಾರಿ ಡಿ. ರೂಪಾ ಅವರು ಮಧ್ಯಸ್ಥಿಕೆ ಮೂಲಕ ಕೇಸ್ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದ್ದರು. ಆದರೆ ರೋಹಿಣಿ ಸಿಂಧೂರಿ ಅವರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಇವರಿಬ್ಬರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಗುರುವಾರ (. 7) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮಾಡಿದಾಗಲೂ ಇಬ್ಬರೂ ಜಗಳ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ನೀವು ಪುನಃ ಹೈಕೋರ್ಟ್‌ಗೆ ಹೋಗಿ ಅಲ್ಲಿಯೇ ನಿಮ್ಮ ಜಗಳ ಬಗೆಹರಿಸಿಕೊಳ್ಳುವಂತೆ ಉಚ್ಛ ನ್ಯಾಯಾಲಯ ವಾಪಸ್ ಕಳುಹಿಸಿದೆ. ಹೀಗಾಗಿ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಡಿ.ರೂಪ ಹಿಂಪಡೆದುಕೊಂಡಿದ್ದಾರೆ.