ಸ್ಪೆಷಲ್ ಸ್ಟೋರಿ

ಐಶ್ವರ್ಯ ಬಾಯಿಗೆ ಹಾಗಲ ಕಾಯಿ, ಗೌತಮಿಗೆ ತಿನ್ನಿಸಿದ್ರು ನೋಡಿ ಹಸಿಮೆಣಸಿನಕಾಯಿ ತಿನ್ನಿಸಿದ್ದಾರೆ

ಶೋಭಾ ಶೆಟ್ಟಿ ಬಿಗ್ ಮನೆಯಿಂದ ತಾವೇ ಸ್ವ ಇಚ್ಛೆಯಿಂದ ಹೊರನಡೆದರೋ ಎಲಿಮಿನೇಷನ್ ಹಂತದಲ್ಲಿದ್ದ ಐಶ್ವರ್ಯಾಗೆ ಮರು ಜೀವ ಸಿಕ್ಕಿ, ಈಗ ಮತ್ತೆ ಪುಟಿದೇಳೋಕೆ ಎಲ್ಲಾ ರೀತಿಯ ಸಿದ್ದತೆಯನ್ನ ನಡೆಸಿದ್ದಾರೆ..

ಈ ವಾರದ ಟಾಸ್ಕ್ ನಿಜಕ್ಕೂ ಇಂಟರೆಸ್ಟಿಂಗ್ ಇದೆ ಕಂಡ್ರಿ, ಟ್ರೋಲ್ ಆಗುವವರೇ ಈ ವಾರ ಟ್ರೋಲ್ ಮಾಡೋಕೆ ಮುಂದಾಗಿದ್ದಾರೆ ಅಂದ್ರೆ ಬಿಗ್ ಮನೆಯಲ್ಲಿ ಈಗ ನ್ಯೂಸ್ ಚಾನಲ್ ತೆರೆದಿದ್ದಾರೆ.. 
ಪರ್ಸನಲ್ ಟಾರ್ಗೆಟ್ ಬಿಗ್ ಮನೆಯಲ್ಲಿ ನ್ಯೂಸ್ ಚಾನಲ್ ಅಂತೇಳಿ ಮತ್ತದೇ ಪರ್ಸನಲ್ ಟಾರ್ಗೆಟ್ ಮಾಡಿದ್ದಾರೆ ಸ್ಪರ್ಧಿಗಳು, ಒಂದು ಮಸ್ತ್ ಮಜಾ ಟಿವಿ ಆದ್ರೆ ಮತ್ತೊಂದು ಧೂಳ್ ಧಮಾಕ ಟಿವಿ, ಮೊದಲ ಟಾಸ್ಕ್ ನಲ್ಲಿ ಬಿಗ್ ಬ್ರೇಕಿಂಗ್ ನ್ಯೂಸ್ನಲ್ಲಿ ಎದುರಾಳಿ ಟೀಂನ ಸ್ಪರ್ಧಿಗಳ ರೋಸ್ಟಿಂಗ್ ಮಾಡಲಾಯ್ತು..
ಎರಡನೇ ಟಾಸ್ಕ್ ಇದೊಂದ್ ಥರಾ ಮಜಾ ಇತ್ತು ಕಂಡ್ರಿ ಎರಡೂ ತಂಡದಿಂದ ಒಬ್ಬೊಬ್ಬ ಸದಸ್ಯ ಅಡುಗೆ ಮಾಡಬೇಕು, ಆ ಅಡುಗೆ ಮಾಡುವ ವಿಧಾನವನ್ನ ದೂರದಲ್ಲೇ ನಿಂತು ತಂಡಗಳ ಸದಸ್ಯರು ಸೂಚನೆ ಕೊಡಬೇಕು, ಆದ್ರೆ ಟ್ವಿಸ್ಟ್ ಏನಪ್ಪ ಅಂದ್ರೆ ಅಡುಗೆ ಮಾಡುವವರ ಕಿವಿಗೆ ಹೆಡ್ ಫೋನ್ ಹಾಕಲಾಗಿರುತ್ತೆ, ಇಲ್ಲಿ ಧೂಳ್ ಧಮಾಕ ತಂಡದಿಂದ ತ್ರಿವಿಕ್ರಮ್ ಅಡುಗೆ ಮಾಡೋದಕ್ಕೆ ಇಳಿದ್ರೆ, ಮಸ್ತ್ ಮಜಾ ತಂಡದಿಂದ ಹನುಮಂತ ಅಡುಗೆ ಮಾಡಿದ್ದಾನೆ..