ದೇಶ

ಶಕ್ತಿಮಾನ್‌ ಟೀಸರ್‌ ಔಟ್..! ಬರ್ತಿದ್ದಾನೆ ನಮ್ ಬಾಲ್ಯದ ಹೀರೋ...? ​

ಮಕ್ಕಳ ಪಾಲಿಗೆ ಆತ ಫೇವರೇಟ್‌ ಹೀರೋ…13 ಸೆಪ್ಟಂಬರ್ 1997 ರಿಂದ 27 ಮಾರ್ಚ್ 2005ರವರೆಗೆ ಕಿರುತೆರೆಯನ್ನ ಆವರಿಸಿಕೊಂಡಿದ್ದ ಶಕ್ತಿಮಾನ್..ಭರವಸೆಯ ನಟ ಮುಖೇಶ್‌ ಖನ್ನ ಇದೀಗ ಮತ್ತೆ ಗಾಳಿಯಲ್ಲಿ ತೇಲಲಿದ್ದಾರೆ..ಸಂಕಷ್ಟದಲ್ಲಿರುವವರನ್ನ ರಕ್ಷಿಸಲಿದ್ದಾರೆ. ಶಕ್ತಿಮಾನ್‌ ಸೂಪರ್‌ ಹೀರೋ..

ಮಕ್ಕಳ ಪಾಲಿಗೆ ಆತ ಫೇವರೇಟ್ಹೀರೋ…13 ಸೆಪ್ಟಂಬರ್ 1997 ರಿಂದ 27 ಮಾರ್ಚ್ 2005ರವರೆಗೆ ಕಿರುತೆರೆಯನ್ನ ಆವರಿಸಿಕೊಂಡಿದ್ದ ಶಕ್ತಿಮಾನ್..ಭರವಸೆಯ ನಟ ಮುಖೇಶ್ಖನ್ನ ಇದೀಗ ಮತ್ತೆ ಗಾಳಿಯಲ್ಲಿ ತೇಲಲಿದ್ದಾರೆ..ಸಂಕಷ್ಟದಲ್ಲಿರುವವರನ್ನ ರಕ್ಷಿಸಲಿದ್ದಾರೆ. ಶಕ್ತಿಮಾನ್ಸೂಪರ್ಹೀರೋ.. ಸೂಪರ್ಟೀಚರ್ಆಗಿ ಬಿಗ್ಸ್ಕ್ರೀನ್ನಲ್ಲಿ ಕಮಾಲ್ಮಾಡಲಿದ್ದಾರೆ.

ಶಕ್ತೀಮಾನ್ಟೀಸರ್ಬಿಡುಗಡೆಯಾಗಿದೆ. ಪೋಸ್ಟರ್ಮತ್ತು ಟೀಸರ್ಎರಡು ಹಿಟ್ಆಗಿವೆ. ಇದೀಗ ಅಭಿಮಾನಿಗಳು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಅಂತ ಕುತೂಹಲದಿಂದ ಕಾಯುತ್ತಿದ್ದಾರೆ.

ಹಿರಿಯ ನಟ ಮುಖೇಶ್ ಖನ್ನಾ ಅವರು 90 ದಶಕದ ಜನಪ್ರಿಯ ಸೂಪರ್ ಹೀರೋಅವರ ಶೋ 'ಶಕ್ತಿಮಾನ್' ಅನ್ನು ಮರಳಿ ತರುವುದಾಗಿ ಹಿಂದೆ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದರು... ಅದ್ರಂತೆ ಇದೀಗ ನಟ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆಅವರು ದೇಸಿ ಸೂಪರ್ ಹೀರೋ ಆಗಿ ಮತ್ತೆ ತೆರೆಗೆ ಬರಲಿದ್ದಾರೆ

ಅವನು ಹಿಂದಿರುಗುವ ಸಮಯ ಬಂದಿದೆನಮ್ಮ ಮೊದಲ ಭಾರತೀಯ ಸೂಪರ್ ಟೀಚರ್-ಸೂಪರ್ ಹೀರೋ…. ದಿನಗಳಲ್ಲಿ ಇದು ನಮ್ಮ ಮಕ್ಕಳಿಗಾಗಿ ಮತ್ತೆ ಬರುತ್ತಿದೆ. ಅದೂ ಒಂದು ಸಂದೇಶದೊಂದಿಗೆ. ಒಂದು ಬೋಧನೆಯೊಂದಿಗೆ, ಇಂದಿನ ಪೀಳಿಗೆಗೆ ವಿಶೇಷವಾಗಿದೆ. ಅದನ್ನು ಎರಡೂ ಕೈಗಳಿಂದ ಸ್ವಾಗತಿಸಿ ಎಂದು ಟೀಸರ್ಆರಂಭವಾಗುತ್ತೆ. ಶಾಲೆಯೊಂದಕ್ಕೆ ಬರುವ ಸೂಪರ್ಮ್ಯಾನ್‌, ಸುಬಾಷ್ಚಂದ್ರ ಬೋಸ್‌, ಚಂದ್ರಶೇಖರ್ಆಜಾದ್‌, ಭಗತ್ಸಿಂಗ್ಫೋಟೋ ಮುಂದೆ ನಿಂತು ಹಾಡು ಹಾಡೋ ಕಂಟೆಂಟ್ಟೀಸರ್ನಲ್ಲಿದೆ..

ತಮ್ಮ ಬಾಲ್ಯದ ನೆಚ್ಚಿನ ಕಾರ್ಯಕ್ರಮವಾದ ಶಕ್ತಿಮಾನ್‌ ನನ್ನ ನೋಡೋಕೆ, ಉತ್ಸುಕರಾಗಿದ್ದಾರೆ. ಆದ್ರೆ ಈ ಶಕ್ತಿಮಾನ್‌ ಸಿನಿಮಾ ರೂಪದಲ್ಲಿ ಬರ್ತಿದ್ದಾನೋ, ವೆಬ್‌ ಸೀರೀಸ್‌ ರೂಪದಲ್ಲಿ ಬರ್ತಿದ್ದಾನೋ, ಅಥವಾ ಟಿವಿಯಲ್ಲಿ ಮರಳಿ ಬರ್ತಾನೋ ಅನ್ನೋ ಕೂತುಹಲವನ್ನ ನಿರ್ಮಾಣ  ತಂಡ ತನ್ನಲ್ಲೇ ಬಚ್ಚಿಟ್ಟುಕೊಂಡಿದೆ.