ಕರ್ನಾಟಕ

ಇನ್ಸ್ ಪೆಕ್ಟರ್ ಶ್ರೀನಿವಾಸನ ಹಠ.. ಮೇಲಾಧಿಕಾರಿಗಳಿಗೆ ಪುಕ-ಪುಕ..!

ಬೆಂಗಳೂರು ಸಿಟಿ ಸಿಸಿಆರ್ ಬಿ ಇನ್ಸ್ ಪೆಕ್ಟರ್ ಆಗಿರುವ ಶ್ರೀನಿವಾಸ್ ಗೌಡ ಇದೀಗ ಹಿರಿಯ ಅಧಿಕಾರಿಗಳಿಂದ ಅನ್ಯಾಯಕ್ಕೊಳಗಾಗಿದ್ದಾರಂತೆ. ಮಾಡದ ತಪ್ಪಿಗೆ ಸಸ್ಪೆಂಡ್-ಟ್ರಾನ್ಫರ್ ಅನ್ನೋ ಶಿಕ್ಷೆ ಕೊಟ್ಟ ಮೇಲಾಧಿಕಾರಿಗಳಿಗೆ ಚಾಲೆಂಜ್ ಮಾಡಿ ಶ್ರೀನಿವಾಸ್ ಮತ್ತೆ ಕೋರ್ಟ್ ಸ್ಟೇ ತಂದ್ರೆ ಇನ್ನೂ ತೊಂದರೆ ಕೊಡ್ತಿದ್ದಾರಂತೆ ಅಧಿಕಾರಿಗಳು.

ಬೆಂಗಳೂರು : ಖಾಕಿ ತೊಟ್ರೂ ತಪರಾಕಿ ಬೀಳೋದು ತಪ್ಪಿಲ್ಲ. ಮೇಲಾಧಿಕಾರಿಗಳು ಗುಮ್ಮಿದ್ರು ಅಂಥ ಹೇಳದೇ ಎದೆಯುಬ್ಬಿಸಿ ಕಣ್ಣೀರಾಕೋ ಅನೇಕ ಪೊಲೀಸರು ನಮ್ಮ ಕಣ್ಣಿಗೆ ಕಾಣದೇ ಕಣ್ಣೊರಿಸಿಕೊಳ್ತಿದ್ದಾರೆ. ಅದೆಲ್ಲ ಬಿಟ್ಟಾಕಿ ಇಲ್ಲೊಬ್ಬ ಇನ್ಸ್ ಪೆಕ್ಟರ್ ಊರೇ ಒಂದು ಕಡೆ ನಿಂತ್ರೂ ನಾನು ನ್ಯಾಯದ ಪರ ನಿಲ್ತೀನಿ ಅಂತ ತೊಡೆತಟ್ಟಿ ನಿಂತಿದ್ದಾರೆ. ಅವ್ರೇ, ಇನ್ಸ್ ಪೆಕ್ಟರ್ ಶ್ರೀನಿವಾಸ್ ಗೌಡ.

ಬೆಂಗಳೂರು ಸಿಟಿ ಸಿಸಿಆರ್ ಬಿ ಇನ್ಸ್ ಪೆಕ್ಟರ್ ಆಗಿರುವ ಶ್ರೀನಿವಾಸ್ ಗೌಡ ಇದೀಗ ಹಿರಿಯ ಅಧಿಕಾರಿಗಳಿಂದ ಅನ್ಯಾಯಕ್ಕೊಳಗಾಗಿದ್ದಾರಂತೆ. ಮಾಡದ ತಪ್ಪಿಗೆ ಸಸ್ಪೆಂಡ್-ಟ್ರಾನ್ಫರ್ ಅನ್ನೋ ಶಿಕ್ಷೆ ಕೊಟ್ಟ ಮೇಲಾಧಿಕಾರಿಗಳಿಗೆ ಚಾಲೆಂಜ್ ಮಾಡಿ ಶ್ರೀನಿವಾಸ್ ಮತ್ತೆ ಕೋರ್ಟ್ ಸ್ಟೇ ತಂದ್ರೆ ಇನ್ನೂ ತೊಂದರೆ ಕೊಡ್ತಿದ್ದಾರಂತೆ ಅಧಿಕಾರಿಗಳು.

ಇನ್ಸ್ ಪೆಕ್ಟರ್ ಕಹಾನಿ :-

ಶ್ರೀನಿವಾಸ್ ಗೌಡ 2009 ರ ಬ್ಯಾಚ್ ನಲ್ಲಿ‌ ಪಿಎಸ್ ಐ ಆಗಿ ಸೆಲೆಕ್ಟ್ ಆದವರು. ಬೆಂಗಳೂರಿನ ‌ಮಲ್ಲೇಶ್ವರಂ, ವಿಶ್ವನಾಥಪುರ ಸೇರಿದಂತೆ ಹಲವು ಠಾಣೆಯಲ್ಲಿ ಕೆಲಸ ಮಾಡಿದವರು. ಕಳೆದ ಮೂರು ವರ್ಷದ ಹಿಂದೆ ಇನ್ಸ್ ಪೆಕ್ಟರ್ ಆಗಿ ಬಡ್ತಿ ಪಡೆದು ಇದೀಗ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ವಿವಿಐಪಿ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಿದ್ದ ಶ್ರೀನಿವಾಸ್ ರ ಬಳಿ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಮಹಮ್ಮದ್ ಇಸಾಕ್ ಎಂಬವರು ಬರ್ತಾರೆ. ಹೀಗೆ ಬಂದವರು ತನ್ನ ಹತ್ತಿರದ ಸಂಬಂಧಿ ಅಸಿಲ್ ಗೆ ಆತನ ಸ್ನೇಹಿತ ಜಾಸಿಂನಿಂದ 25 ಲಕ್ಷ ಅನ್ಯಾಯವಾಗಿದೆ ಎಂದು ಗೋಳನ್ನ ಹೇಳಿಕೊಳ್ತಾರೆ. ಪರಿಚಯಸ್ಥ ವ್ಯಕ್ತಿ ಆಗಿದ್ದರಿಂದ ಶ್ರೀನಿವಾಸ್ ಹಣ ಪಡೆದಿದ್ದ ವ್ಯಕ್ತಿ ಯಾದ ಜಾಸಿಂನ ತಂದೆ ಅಯೂಬ್ ಬೇಗ್ ಗೆ ಕರೆಮಾಡ್ತಾರೆ. ಅಯೂಬ್ ಬೇಗ್ ಕೂಡ ಪೊಲೀಸ್ ಇನ್ಫಾರ್ಮರ್ ಆಗಿ ಶ್ರೀನಿವಾಸ್ ಗೆ ಈ ಹಿಂದೆ ಸಹಾಯವನ್ನ ಮಾಡಿದವರೇ. ಆ ಸಲಿಗೆಯಿಂದ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅಯೂಬ್ ಬೇಗ್ ಗೆ ಕರೆಮಾಡಿ ನಿಮ್ಮ ಮಗ ಜಾಸಿಂ, ನನ್ನ ಸ್ನೇಹಿತರ ಸಂಬಂಧಿ ಅಸಿಲ್ ಗೆ ವಂಚಿಸಿದ್ದಾನೆ. ಯುಎಸ್ ಡಿಟಿ‌ ಶೇರುಮಾರುಕಟ್ಟೆಯ ವ್ಯಾಲೆಟ್ ನಲ್ಲಿರುವ 25 ಲಕ್ಷ ರೂಪಾಯಿ ಹಣವನ್ನ ಕ್ಯಾಶ್ ಮಾಡಿಕೊಡ್ತೀನಿ ಅಂತ ನಿಮ್ಮ ಮಗ ಜಾಸಿಂ ಹೇಳಿ ಮೋಸಮಾಡಿದ್ದಾನಂತೆ ಹಣವನ್ನ ಹಿಂದಿರುಗಿಸಿ ಎಂದು ಇನ್ಸ್ ಪೆಕ್ಟರ್ ಶ್ರೀನಿವಾಸ್ ಅಯೂಬ್ ಗೆ ಹೇಳಿದ್ದರಂತೆ.

ಅದರಂತೆ ಹಣ ಕೊಟ್ಟವರು, ಹಣ ಪಡೆದವರು ಸಂಬಂಧಿಕರೇ ಆಗಿದ್ದರಿಂದ ಒಳಮಾತುಕತೆಯಲ್ಲೇ ಇನ್ಸ್ ಪೆಕ್ಟರ್ ಶ್ರೀನಿವಾಸ್ ರ ಎದುರಲ್ಲೇ ಒಪ್ಪಂದದ ಪತ್ರಗಳನ್ನ ಮಾಡಿಕೊಂಡು ತಾವಿಬ್ಬರೇ ಹಣದ ವಿಚಾರವನ್ನ ಬಗೆಹರಿಸಿಕೊಳ್ಳೋದಾಗಿ ಹೇಳಿ ತೆರಳಿದ್ದರು.

ವಿಷ್ಯ ಅದಲ್ಲ ಹಣಕೊಡುವ ಬಗ್ಗೆ ಮಾಡಿಕೊಂಡಿರುವ ಒಪ್ಪಂದದ ಪತ್ರ ಅದೇಗೋ ಪೊಲೀಸ್ ಆಯುಕ್ತರಾದ ದಯಾನಂದ್ ರ ಕೈಗೆ ಸಿಕ್ಕಿದೆ. ಇದೇ ಕಾರಣಕ್ಕೆ ಇನ್ಸ್ ಪೆಕ್ಟರ್ ಸೆಟ್ಲ್ ಮೆಂಟ್ ವಿಚಾರದಲ್ಲಿ ಇನ್ವಾಲ್ಮೆಂಟ್ ಇದ್ದಾರೆ ಅಂದುಕೊಂಡು ಅಕ್ಟೋಬರ್ 4 ಕ್ಕೆ ಶ್ರೀನಿವಾಸ್ ರನ್ನ ಸಸ್ಪೆಂಡ್ ಮಾಡ್ತಾರೆ. ಅಷ್ಟೇ ಅಲ್ಲದೆ ‌ಅದೇ ದಿನ ಉಡುಪಿ ಕೋಸ್ಟಲ್ ಗಾರ್ಡ್ ಗೆ ಟ್ರಾನ್ಫರ್ ಮಾಡ್ತಾರೆ. ಆದ್ರೆ, ಶ್ರೀನಿವಾಸ್ ಹೈಕೋರ್ಟ್ ಗೆ ಹೋಗಿ ಅಮಾನತು,ಲೀನ್ ನಲ್ಲಿ ಟ್ರಾನ್ಫರ್ ಮಾಡಿರೋದಕ್ಕೆ ಸ್ಟೇ ಹಾಗೆಯೇ ಕೆಐಟಿ ನೀಡಿದ್ದ ನೋಟಿಸ್ ಗೂ ಸ್ಟೇ ಪಡೆದು ಮತ್ತೆ ವಿವಿಐಪಿ‌ ಸೆಕ್ಯುರಿಟಿಗೆ ರಿಪೋರ್ಟ್ ಮಾಡಿಕೊಳ್ಳಲು ಅಕ್ಟೋಬರ್ 31 ಕ್ಕೆ ಬರ್ತಾರೆ. ಆದರೆ, ಪೊಲೀಸ್ ಆಯುಕ್ತರು ಡ್ಯುಟಿಯಲ್ಲಿ ಮುಂದುವರಿಯಲು ಈತನಕ ಚಾಲನಾ ಆದೇಶವನ್ನ ನೀಡಿಲ್ಲವಂತೆ.

ಮಾಡದ ತಪ್ಪಿಗೆ ಒಂದೇ ದಿನದಲ್ಲಿ ಸ್ಥಿರೀಕರಣದ ಆದೇಶ ಹೊರಡಿಸಿರೋದು ಹೇಗೆ. ತಪ್ಪು-ಸರಿಯ ಪರಾಮರ್ಶೆ ಹಾಗೂ ತನಿಖೆಯಿಂದ ತಪ್ಪು ಸಾಬೀತಾದ್ರೆ ಸ್ಥಿರೀಕರಣ ಆದೇಶ ನೀಡೋಕೆ ತಿಂಗಳುಗಟ್ಟಲೆ ಬೇಕಾಗುತ್ತದೆ. ಆದ್ರೆ,‌ಒಂದೇ ದಿನದಲ್ಲಿ ಸ್ಥಿರೀಕರಣ ಆದೇಶ ನೀಡಿ ಏಕಾಏಕಿ ವರ್ಗಾವಣೆ ಮಾಡಿದ್ರೆ ಹೇಗೆ..? ಇದೆಲ್ಲವನ್ನ ಹಿಮ್ಮೆಟ್ಟಿಸಿ ಕೋರ್ಟ್ ನಿಂದ ಸ್ಟೇ ತಂದ್ರೂ ಯಾಕಿನ್ನೂ ಡ್ಯುಟಿಗೆ ರಿಪೋರ್ಟ್ ಆಗೋಕೆ ಬಿಟ್ಟಿಲ್ಲ‌ ಅನ್ನೋ ಪ್ರಶ್ನೆಯನ್ನ ಇನ್ಸ್ ಪೆಕ್ಟರ್ ಶ್ರೀನಿವಾಸ್ ಪೊಲೀಸ್‌ ಆಯುಕ್ತರಿಗೆ ಕೇಳ್ತಿದ್ದಾರೆ.

ಈ ಹಿಂದೆ ಡಿವೈಎಸ್ಪಿ ಗಣಪತಿಯವರು ಮೇಲಾಧಿಕಾರಿಗಳ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಸುಸೈಡನ್ನ ಮಾಡಿಕೊಂಡಿದ್ದರು. ಇದೀಗ ಶ್ರೀನಿವಾಸ್ ರವರಿಗೂ ಅಂತಹದ್ದೇ ಕಿರುಕುಳ ಎದುರಾದಂತೆ ಕಾಣಿಸ್ತಿದೆ. ತಮ್ಮ ನೋವನ್ನ ಶ್ರೀನಿವಾಸ್ ಹಾಗೂ ಅವರ ಸಂಸಾರ‌ ಇದೀಗ ಸಮಯ ನ್ಯೂಸ್ ನ ಮುಂದೆ ಹೇಳಿಕೊಂಡಿದ್ದಾರೆ.