ಸುಬ್ರಹ್ಮಣ್ಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನ ನಡೆಸಿದ್ದಾರೆ. ಎರಡು ಪತ್ಯೇಕ ಪ್ರಕರಣಗಳನ್ನ ಭೇದಿಸಿ 340 ಗ್ರಾಂ ಚಿನ್ನಭರಣ, 1.1 ಕೆಜಿ ಬೆಳ್ಳಿ ಹಾಗೂ 2.5 ನಗದನ್ನ ವಶಕ್ಕೆ ಪಡೆಯಲಾಗಿದೆ. ಮನೆಗಳ್ಳತ ಮಾಡುತಿದ್ದ ನಿವೃತ್ತ ಸರ್ಕಾರಿ ಉದ್ಯೋಗಿ ನಾಗರಾಜು@ ಫರೇಸ್ಟ್ ನಾಗ (60) ಆರೋಪಿಯನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೂಲತಃ ಕೋಲಾರ ಜಿಲ್ಲೆಯ ಕಾಮಸಮುದ್ರ ನಿವಾಸಿ ಅಗಿರುವ ಆರೋಪಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ. ಆದರೆ ನಿವೃತ್ತವಾದ ನಂತರ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಹಾಗಾಗಿ ಆರೋಪಿ ನಾಗರಾಜು ವಿರುದ್ಧ ಆಂಧ್ರ, ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ 30 ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಕಾರ್ಯಾಚರಣೆಗಿಳಿದಿದ್ದ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.