ಗೋಮುಖ ವ್ಯಾಘ್ರ, ಎರಡು ತಲೆಯ ಹಾವು., ನಂಬಿಕೆ..ಅಪನಂಬಿಕೆ.. ಇದು ಮಂಗಳವಾರದ ಬಿಗ್ ಬಾಸ್ ಎಪಿಸೋಡ್ನಲ್ಲಿ ಸ್ಪರ್ಧಿಗಳ ಬಾಯಿಂದ ಹೊರ ಬಂದ ಮಾತುಗಳಾಗಿದ್ದವು, ಹೌದು ಬಿಗ್ ಮನೆಯಲ್ಲಿ ತ್ರಿವಿಕ್ರಂ ಹಾಗೂ ಮೋಕ್ಷಿತಾ ಮಧ್ಯೆ ಮತ್ತೆ ಮಾತಿನ ಸಮರ ನಡೆದಿದೆ, ವೀಕ್ ಎಂಡ್ ನಾಮಿನೇಷನ್ಗಾಗಿ ಬಿಗ್ ಬಾಸ್ ಮುಕ್ತ ವೇದಿಕೆಯನ್ನ ಕಲ್ಪಿಸಿ, ಈ ವಾರ ಮನೆಯಿಂದ ಹೊರ ಹೋಗುವ ಸದಸ್ಯನ ಹೆಸರನ್ನ ಉಗ್ರಂ ಮಂಜು ಮುಂದೆ ಪ್ರಸ್ತಾಪಿಸಬೇಕು ಹಾಗೂ ಅವರು ನಾಮಿನೇಟ್ ಆಗಲು ಕೊಟ್ಟ ಕಾರಣಗಳು ಸೂಕ್ತವೋ ಇಲ್ಲವೋ ಅನ್ನೋದನ್ನ ಮಂಜು ನಿರ್ಧಾರ ಮಾಡ್ಬೇಕು ಅಂತಾ ಹೇಳಿದ್ರು, ಈ ವೇಳೆ ನೋಡಿ ಶುರುವಾಯ್ತು ತ್ರಿವಿಕ್ರಂ ಹಾಗೂ ಮೋಕ್ಷಿತಾ ನಡುವೆ ವಾಕ್ಸಮರ..
ಇಲ್ಲಿ ಉಗ್ರಂ ಮಂಜು ಸಮ್ಮುಖದಲ್ಲಿ ಮೋಕ್ಷಿತಾ ತ್ರಿವಿಕ್ರಂ ಹೆಸರನ್ನ ನಾಮಿನೇಟ್ ಮಾಡಿ, ವಾರದ ಹಿಂದೆ ಮೋಕ್ಷಿತಾ ಹಾಗೂ ತ್ರಿವಿಕ್ರಂ ಮಧ್ಯೆ ನಡೆದಂಥಾ ಒಂದಷ್ಟು ಮಾತುಗಳನ್ನ ಉಗ್ರಂ ಮಂಜು ಮುಂದಿಟ್ಟಿದ್ದಾರೆ..ಹೌದು ತ್ರಿವಿಕ್ರಂ ಎರಡು ಮುಖ ಇರುವ ವ್ಯಕ್ತಿ. ಅವರಿಗೆ ನನ್ನ ಜೊತೆ ಆಡಬೇಕು ಎನ್ನುತ್ತಾರೆ. ನಾನು ಅದಕ್ಕೆ ಓಕೆ ಎಂದಿದ್ದೆ. ನನ್ನ ಜೊತೆ ಇದ್ದಾಗ ಮಂಜು ಅವರ ಬಗ್ಗೆ ನನ್ನ ಬಳಿ ಕೆಟ್ಟದಾಗಿ ಮಾತನಾಡಿದ್ದರು. ಆ ಬಳಿಕ ಅವರ ಬಳಿಯೇ ಡೀಲ್ ಮಾಡಿಕೊಂಡಿದ್ದರು. ಅವರು ಗೋಮುಖ ವ್ಯಾಘ್ರ ಎಂದು ನಾನು ಈ ಮೊದಲು ಹೇಳಿದ್ದೆ. ಅದನ್ನು ಈಗಲೂ ಹೇಳುತ್ತೇನೆ’ ಎಂದಿದ್ದಾರೆ ಮೋಕ್ಷಿತಾ.
ಇನ್ನು ತ್ರಿವಿಕ್ರಂ ಮೋಕ್ಷಿತಾರನ್ನ ನಾಮಿನೇಟ್ ಮಾಡಿ, ನನ್ನ 57 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಅತಿ ಕಡಿಮೆ ಮಾತನಾಡಿದ್ದು ಎಂದರೆ ಅದು ಮೋಕ್ಷಿತಾ ಜೊತೆ. ಮೋಕ್ಷಿತಾ ಚೆನ್ನಾಗಿದ್ದಾಗ ಚೆನ್ನಾಗಿರುತ್ತಾರೆ. ಬೇಡ ಎನಿಸಿದಾಗ ಎಲ್ಲವನ್ನೂ ಕೆಟ್ಟದ್ದಾಗಿ ಹೇಳುತ್ತಾರೆ’ ಎಂದು ತ್ರಿವಿಕ್ರಂ ಅವರು ಅಭಿಪ್ರಾಯಪಟ್ಟರು. ಈ ಮೊದಲು ಮೋಕ್ಷಿತಾ ಅವರು ಮಂಜು ಜೊತೆ ಆಪ್ತವಾಗಿ ಇದ್ದರು. ಆಗ ಮಂಜು ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು. ಆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಮೂಡಿತ್ತು. ಈಗ ಇಬ್ಬರೂ ಬೇರೆ ಆಗಿದ್ದಾರೆ. ಮೋಕ್ಷಿತಾ ಅವರು ಶಿಶಿರ್ ಗ್ಯಾಂಗ್ನಲ್ಲಿ ಈಗ ಗುರುತಿಸಿಕೊಂಡಿದ್ದಾರೆ.