ಪ್ರತಿ ವರ್ಷ ಡಿಸೆಂಬರ್ 16ರಂದು ಪಾಕಿಸ್ತಾನ ವಿರುದ್ಧ ಜಯಗಳಿಸಿದ ಹಿನ್ನೆಲೆ ವಿಜಯ್ ದಿವಸ್ ಆಗಿ ಆಚರಿಸಲಾಗುತ್ತದೆ. 1971ರಲ್ಲಿ ಪಾಕಿಸ್ತಾನದ ಮೇಲೆ ನಡೆದ ಯುದ್ಧದಲ್ಲಿ ಭಾರತದ ವಿಜಯದ ಸಂಕೇತ ಮತ್ತು ಬಾಂಗ್ಲಾದೇಶ ರಚನೆ ಹಿನ್ನೆಲೆ ಈ ದಿನವನ್ನ ಸ್ಮರಿಸಲಾಗುತ್ತದೆ. ನೆರೆಯ ಬಾಂಗ್ಲಾದೇಶಕ್ಕೆ ನೆರವು ನೀಡುವ ಮೂಲಕ ಪಾಕ್ ವಿರುದ್ಧ ಭಾರತ ಜಯ ಸಾಧಿಸಿತ್ತು. ಈ ವೇಳೆ ದೇಶದ ರಕ್ಷಣೆಗೆ ಹೋರಾಡಿ ಹುತಾತ್ಮರಾದ ಯೋಧರನ್ನ ಪ್ರತಿವರ್ಷ ಸ್ಮರಿಸಿ ಗೌರವಿಸಲಾಗುತ್ತದೆ. ಯೋಧರ ನಿಸ್ವಾರ್ಥ ಸಮರ್ಪಣೆ, ಅಚಲ ಸಂಕಲ್ಪ ನಮಗೆ ಕೀರ್ತಿ ತಂದಿದೆ ಎಂದು ಪ್ರಧಾನಿ ಮೋದಿ ವಿಜಯ್ ದಿವಸ್ ದಿನದಂದು ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ..
ಮತ್ತೊಂದೆಡೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನ್ಯಾಷನಲ್ ವಾರ್ ಮೆಮೋರಿಯಲ್‌ಗೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ..