ಸ್ಪೆಷಲ್ ಸ್ಟೋರಿ

ಬಾಬಾ ವಂಗಾ 2025ರ ಭವಿಷ್ಯ..ವಿನಾಶ, ಮುಸ್ಲಿಂ ಆಳ್ವಿಕೆ, ಏನಿದರ ಒಳ ಮರ್ಮ..?

ಬಾಬಾ ವಂಗಾ ಹೇಳಿದ ಸಾಕಷ್ಟು ಭವಿಷ್ಯಗಳು ಈ ಹಿಂದಿನಿಂದಲೂ ಸತ್ಯವಾಗುತ್ತಲೇ ಬಂದಿದೆ, ಅದೇ ರೀತಿ 2024 ಕಳೆದು ಇನ್ನೇನು 2025ರ ಹೊಸ್ತಿಲಿಗೆ ಕಾಲಿಡುವ ಈ ಸಂದರ್ಭದಲ್ಲಿ ಬಾಬಾ ಉಲ್ಲೇಖಿಸಿರುವ ಭವಿಷ್ಯವಾದ್ರೂ ಏನು ಇಲ್ಲಿದೆ ನೋಡಿ..

ವಾಣಿ ಇದು ಅಂತಿಂಥಾ ವಾಣಿಯಲ್ಲಿ ಬಾಬಾ ವಂಗಾ ಅಸಲಿ ಭವಿಷ್ಯವಾಣಿ, 2025 ಪ್ರಪಂಚದಲ್ಲಿ ಯಾವೆಲ್ಲಾ ಬೆಳವಣಿಗೆಗಳು ಸಂಭವಿಸಲಿದೆ ಅನ್ನೋ ಭವಿಷ್ಯವಾಣಿ ಕೇಳಿದ್ರೆ ನೀವೇ ಒಮ್ಮೆ ಬೆಚ್ಚಿ ಬೀಳ್ತೀರಾ.. 2025 ರ ವರ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. 2024ರ  ಸುಖ ದುಖಃಗಳನ್ನ ಮರೆತು 2025ರ ಸ್ವಾಗತಕ್ಕೆ ಕಾದುಕುಳಿತಿದ್ದಾರೆ ಈ ಮಧ್ಯ ಬಾಬಾ ವೆಂಗಾ ಹೇಳಿರುವ ಭವಿಷ್ಯವಾಣಿ ಜನರಿಗೆ ಅಕ್ಷರಶಃ ಶಾಕ್ ನೀಡಿದೆ..
ಹೌದು.. ಇತ್ತೀಚಿಗೆ ಬಾಬಾ ಬೆಂಗಾ ಭವಿಷ್ಯವಾಣಿ ಚೆರ್ಚೆಗೆ ಗ್ರಾಸವಾಗಿದೆ. ಇದೀಗ 2025 ಮತ್ತು 2043 ರ ಬಗ್ಗೆ ಬಾಬಾ ಉಲ್ಲೇಖಿಸಿರುವ ಭಯಾನಕ ಭವಿಷ್ಯವಾಣಿಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಾಬಾ ಅವರ ಪ್ರಕಾರ, 2025 ರಲ್ಲಿ ಪ್ರಪಂಚದ ವಿನಾಶದ ಪ್ರಾರಂಭದ ವರ್ಷವಾಗಲಿದೆಯಂತೆ, ಜನಸಂಖ್ಯೆಯ ನಷ್ಟ ಮತ್ತು ಅನೇಕ ಘಟನೆಗಳು ಘಟಿಸಲಿದೆಯಂತೆ..  ಬಾಬಾ ವೆಂಗಾ ಅವರ ಪ್ರಕಾರ, ಪ್ರಪಂಚದ ಅಂತ್ಯವು 2025 ರಿಂದ ಪ್ರಾರಂಭವಾಗಬಹುದು ಎಂದು ಉಲ್ಲೇಖಿಸಲಾಗಿದ್ಯಂತೆ. ಅಲ್ಲದೆ, 2025 ರಲ್ಲಿ, ಯುರೋಪ್ನಲ್ಲಿ ಪ್ರಮುಖ ಮತ್ತು ವಿನಾಶಕಾರಿ ಯುದ್ಧ ನಡೆಯುತ್ತಂತೆ. ಈ ಯುದ್ಧವು ಯುರೋಪ್ ಅನ್ನು ವಿನಾಶದ ಅಂಚಿಗೆ ಕೊಂಡ್ಯೊಯ್ದು ಅನೇಕ ಜೀವಗಳನ್ನು ನಾಶವಾಗುತ್ತಂತೆ. ಇದು ಯುರೋಪಿನ ಆರ್ಥಿಕತೆ ಮತ್ತು ಸಮಾಜದ ಮೇಲೆ ಹೆಚ್ಚು ಭಾರವನ್ನು ಉಂಟುಮಾಡಬಹುದು ಅಂತಾ ಹೇಳಲಾಗ್ತಿದೆ. 
2043 ರಲ್ಲಿ ಯುರೋಪಿನಲ್ಲಿ ಮುಸ್ಲಿಂ ದೊರೆ ಆಳ್ವಿಕೆ ಶುರುವಾಗುತ್ತಂತೆ. ಈ ಸಮಯದಲ್ಲಿ ಜಗತ್ತಿನಲ್ಲಿ ಪ್ರಮುಖ ಭೌಗೋಳಿಕ-ರಾಜಕೀಯ ಬದಲಾವಣೆಯಾಗಲಿದೆ ಎಂದು ಬಾಬಾ ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ..