ಕರ್ನಾಟಕ

ವಕ್ಫ್‌ ವಿರುದ್ಧ ಮತ್ತೆ ಹೆಚ್ಚಾಯ್ತು ಕಾವು...ಶ್ರೀರಂಗಪಟ್ಟಣದಲ್ಲಿ ಬಂದ್‌ಗೆ ಕರೆ

ರೈತರು ಹಾಗೂ ಸರ್ಕಾರದ ಆಸ್ತಿ ಮೇಲೆ ವಕ್ಫ್‌ ಕಣ್ಣು ನೆಟ್ಟಿದೆ ಎಂದು ಮಂಡ್ಯ ರೈತರು ಸಿಡಿದೆದ್ದಿದ್ದಾರೆ.

ರೈತರು ಹಾಗೂ ಸರ್ಕಾರದ ಆಸ್ತಿ ಮೇಲೆ ವಕ್ಫ್‌ ಕಣ್ಣು ನೆಟ್ಟಿದೆ ಎಂದು ಮಂಡ್ಯ  ರೈತರು ಸಿಡಿದೆದ್ದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸಂಜೆ 5 ಗಂಟೆಯವರೆಗೂ ವಿವಿಧ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ ನಡೆಯುತ್ತಿದೆ.  ಈಗಾಗಲೇ ಧ್ವನಿವರ್ಧಕ ಮೂಲಕ ಬಂದ್‌ ಬಗ್ಗೆ ಮಾಹಿತಿ ನೀಡಲಾಗಿದ್ದು, ಬಂದ್‌ ಯಶಸ್ವಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ.

ಪುರಾತತ್ವ ಇಲಾಖೆ ಕಟ್ಟಡಗಳು, ಕೋಟೆ ಕೊತ್ತಲುಗಳು, ಸಾರ್ವಜನಿಕ ಪಾರ್ಕ್‌ಗಳು ಹೀಗೆ 50ಕ್ಕೂ ಹೆಚ್ಚು ರೈತರ ಆರ್‌ಟಿಸಿಗಳಲ್ಲಿ ವಕ್ಫ್‌ ಹೆಸರು ನಮೂದಾಗಿದೆ. ಹೀಗಾಗಿ ಭೂ  ದಾಖಲೆಗಳಲ್ಲಿ  ವಕ್ಫ್‌ ಹೆಸರು ತೆಗೆದು ಹಾಕುವಂತೆ ಒತ್ತಾಯಿಸಿ ಬಂದ್‌ಗೆ ಕರೆ ಕೊಡಲಾಗಿದೆ. ವಿಶ್ವ ಹಿಂದೂ  ಪರಿಷತ್‌, ಬಜರಂಗದಳ, ದಲಿತ ಪರ ಸಂಘಟನೆ, ಕನ್ನಡ ಪರ ಸಂಘಟನೆ ಹಾಗೂ ರೈತಪರ ಸಂಘಟನೆಗಳು ಸೇರಿ ಹಲವು ಸಂಘಟನೆಗಳು ಬಂದ್‌ ಮೂಲಕ ಪ್ರತಿಭಟನೆ ನಡೆಸುತ್ತಿವೆ.