ದೇಶ

ಸದ್ದಿಲ್ಲದೆ ಮದುವೆಯಾದ ಒಲಿಂಪಿಕ್‌ನ ಚಿನ್ನದ ಹುಡುಗ ನೀರಜ್ ಚೋಪ್ರಾ

ದೇಶದ ಸ್ಟಾರ್ ಜಾವೆಲಿನ್ ಪ್ಲೇಯರ್ ನೀರಜ್ ಚೋಪ್ರಾ ಅವರು ಹಿಮಾನಿ ಮೋರ್ ಜೊತೆ ಸಪ್ತಪದಿ ತುಳಿದಿದ್ದಾರೆ.. ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ನೀರಜ್ ಚೋಪ್ರಾ, ಜೀವನದ ಹೊಸ ಅಧ್ಯಾಯವನ್ನು ಶುರು ಮಾಡಿದ್ದೇನೆ ಎಂದಿದ್ದಾರೆ..

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ್ ನೀರಜ್ ಚೋಪ್ರಾ ಸದ್ದಿಲ್ಲದೆ ವಿವಾಹವಾಗುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ.. ಸಾಮಾಜಿಕ ಜಾಲತಾಣದ ಮೂಲಕ ನೀರಜ್ ಚೋಪ್ರಾ ತಮ್ಮ ಮದುವೆಯ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.. ದೇಶದ ಸ್ಟಾರ್ ಜಾವೆಲಿನ್ ಪ್ಲೇಯರ್ ನೀರಜ್ ಚೋಪ್ರಾ ಅವರು ಹಿಮಾನಿ ಮೋರ್ ಜೊತೆ ಸಪ್ತಪದಿ ತುಳಿದಿದ್ದಾರೆ.. ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ನೀರಜ್ ಚೋಪ್ರಾ, ಜೀವನದ ಹೊಸ ಅಧ್ಯಾಯವನ್ನು ಶುರು ಮಾಡಿದ್ದೇನೆ. ನಮ್ಮನ್ನು ಈ ಹಂತಕ್ಕೆ ತಲುಪಿಸಿದ ಪ್ರತಿಯೊಂದು ಆಶೀರ್ವಾದಕ್ಕೂ ಕೃತಜ್ಞ.. ಪ್ರೀತಿಯಿಂದ ಬಂಧಿಸಲ್ಪಟ್ಟಿದೆ ಎಂದು ಬರೆದುಕೊಂಡಿದ್ದಾರೆ..

ಹಿಮಾನಿ ಮೋರ್ ಟೆನಿಸ್ ಆಟಗಾರ್ತಿಯಾಗಿದ್ದು,ಆಗ್ನೇಯ ಲೂಯಿಸಿಯಾನ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದಿದ್ದಾರೆ.. ಅವರು ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾಲಯದಲ್ಲಿ ಟೆನಿಸ್‌ನಲ್ಲಿ ಅರೆಕಾಲಿಕ ಸಹಾಯಕ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.. ನೀರಜ್‌ ಚೋಪ್ರಾ ವಿವಾಹದ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ತುಂಬಾ ಖಾಸಗಿಯಾಗಿ ವಿವಾಹ ಕಾರ್ಯಕ್ರಮ ನಡೆದಿದೆ.