ನಾಲ್ವರು ಮುಸುಕುದಾರಿಗಳು ಕಾರು ಅಡ್ಡಗಟ್ಟಿ ರಾಬರಿ ಮಾಡಿರುವ ಘಟನೆ, ಮೈಸೂರು ಜಿಲ್ಲೆ ಜಯಪುರ ಹೋಬಳಿಯ ಹಾರೋಹಳ್ಳಿ ಬಳಿ ನಡೆದಿದೆ. ಎರಡು ಕಾರಿನಲ್ಲಿ ಬಂದಿದ್ದ ಮುಸುಕುದಾರಿಗಳು, ಇನೋವಾ ಕಾರು ಅಡ್ಡಗಟ್ಟಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣದ ಜೊತೆಗೆ ವ್ಯಕ್ತಿಯ ಕಾರನ್ನೂ ಹೊತ್ತೊಯ್ದಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ಕೇರಳ ಮೂಲದವನು ಎನ್ನಲಾಗಿದೆ. ಹವಾಲಾ ಹಣ ರಾಬರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ಕಳ್ಳರ ಜಾಡನ್ನು ಬೆನ್ನು ಹತ್ತಿದ್ದಾರೆ.