ಕರ್ನಾಟಕ
ರಾಜ್ಯದಲ್ಲಿ ಪರ್ಯಾಯ ರಾಜಕೀಯ ಚಳವಳಿಗೆ ನವಕರ್ನಾಟಕ ನಿರ್ಮಾಣ ಸಮಿತಿ ಚಾಲನೆ
ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಭಾಷಾ ಚಳುವಳಿ, ಕಾರ್ಮಿಕ ಚಳುವಳಿ, ಪರಿಸರ ಚಳುವಳಿ, ಮಹಿಳಾ ಮತ್ತು ವಿದ್ಯಾರ್ಥಿ ಯುವಜನ ಚಳುವಳಿಗಳು ಒಗ್ಗೂಡಿ ನವಕರ್ನಾಟಕ ನಿರ್ಮಾಣಕ್ಕಾಗಿ ಜನತಾ ಪ್ರಣಾಳಿಕೆ ರೂಪಿಸಿವೆ..
ರಾಜ್ಯದಲ್ಲಿ ಪರ್ಯಾಯ ರಾಜಕೀಯ ಚಳವಳಿಗೆ ನವಕರ್ನಾಟಕ ನಿರ್ಮಾಣ ಸಮಿತಿ ಚಾಲನೆ ನೀಡಿದೆ.. ಅದರ ನೀಲನಕ್ಷೆಯಾಗಿ ಇಂದು ಬೆಂಗಳೂರಿನ ಭಾರತ್ ಸೈಟ್ಸ್ ಆ್ಯಂಡ್- ಗೈಡ್ಸ್ ಸಭಾಂಗಣದಲ್ಲಿ ಜನತಾ ಪ್ರಣಾಳಿಕೆ' ಬಿಡುಗಡೆ ಮಾಡಲಾಗಿದೆ.. ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಭಾಷಾ ಚಳುವಳಿ, ಕಾರ್ಮಿಕ ಚಳುವಳಿ, ಪರಿಸರ ಚಳುವಳಿ, ಮಹಿಳಾ ಮತ್ತು ವಿದ್ಯಾರ್ಥಿ ಯುವಜನ ಚಳುವಳಿಗಳು ಒಗ್ಗೂಡಿ ನವಕರ್ನಾಟಕ ನಿರ್ಮಾಣಕ್ಕಾಗಿ ಜನತಾ ಪ್ರಣಾಳಿಕೆ ರೂಪಿಸಿವೆ.. ಡಮರುಗ ಬಾರಿಸುವ ಮೂಲಕ ಕಾರ್ಯಕ್ರಮವನ್ನ ಗಣ್ಯರು ಉದ್ಘಾಟನೆ ಮಾಡಿದ್ದಾರೆ.. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ವಹಿಸಿದ್ದಾರೆ.. ಸಮಾರಂಭದಲ್ಲಿ ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾದ ಎಂ. ಗೋಪಿನಾಥ್ ಮತ್ತು ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಕರ್ನಾಟಕ ಯೂನಿರ್ವಸಿಟಿಯ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ಶಿವರುದ್ರ ಕಲ್ಲೋಳಿಕರ್, ಟಿಪ್ಪು ಕ್ರಾಂತಿ ಸೇನೆಯ ಸಂಸ್ಥಾಪಕರಾದ ಡಾ. ದಸ್ತಗಿರ್ ಮುಲ್ಲಾ ಹಲವರು ಭಾಗಿಯಾಗಿದ್ದಾರೆ..