ವೈರಲ್

ಅಂದು ಜಿಲ್ಲಾಧಿಕಾರಿ.. ಇಂದು ಸನ್ಯಾಸಿ.. ಐಎಎಸ್‌ ಅಧಿಕಾರಿ ಜೀವನವೇ ರೋಚಕ

ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ.. ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಸನ್ಯಾಸಿಯಾಗಿ ಪ್ರತ್ಯಕ್ಷವಾಗಿದ್ದಾರೆ.. ನಿವೃತ್ತ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ್ ಫೋಟೋ ಈಗ ಫುಲ್ ವೈರಲ್ ಆಗಿದೆ..

ವೈರಾಗ್ಯ ಅನ್ನೋದು ಯಾರಿಗೆ..? ಯಾವಾಗ..? ಆವರಿಸಿಕೊಳ್ಳುತ್ತೆ ಅನ್ನೋದೇ ಗೊತ್ತಾಗಲ್ಲ.. ಸುಖದ ಸುಪ್ಪತ್ತಿಗೆಯಲ್ಲಿದ್ರೂ ಸರಿ.. ಅಧಿಕಾರ, ಪ್ರಭಾವವಿದ್ರೂ ಸರಿ.. ಲೌಕಿಕ ಜೀವನದಿಂದ ದೂರ ಆಗೋರು ನಮ್ಮ ನಡುವೆ ಇದ್ದೇ ಇದ್ದಾರೆ.. ಈ ಬಾರಿ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಾಧು-ಸಂತರು, ಆಘೋರಿಗಳು, ನಾಗಸಾಧುಗಳು ತಮ್ಮ ಆಧ್ಯಾತ್ಮಿಕ ಜೀವನದಿಂದ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ..

ಈ ಮಧ್ಯೆ ಐಐಟಿ ಬಾಬಾ, ತನ್ನ ಕಣ್ಣಿನ ಮೂಲಕವೇ ನ್ಯಾಷನಲ್‌ ಕ್ರಶ್‌ ಎಂದು ಕರೆಸಿಕೊಂಡ ರುದ್ರಾಕ್ಷಿ ಮಾಲೆ ಮಾರುವ ಮೊನಾಲೀಸಾ ಸಖತ್‌ ಸದ್ದು ಮಾಡ್ತಿರೋದು ನಿಮಗೆ ಗೊತ್ತೇ ಇದೆ.. ಇದೆಲ್ಲಾದರ ನಡುವೆ ಇದೀಗ ಮಹಾ ಕುಂಭಮೇಳದಲ್ಲಿ ಭಾಗವಹಿಸಿರುವ ಕರ್ನಾಟಕದಲ್ಲಿದ್ದ ಓರ್ವ ವ್ಯಕ್ತಿ ಎಲ್ಲರ ಸೆಂಟ್ರಫ್‌ ಅಟ್ಯಾಕ್ಷನ್‌ ಆಗಿದ್ದಾರೆ.. ಏಕೆಂದರೆ ಜಿಲ್ಲಾಧಿಕಾರಿಯಾಗಿ ಆಡಳಿತ ನಡೆಸಿದ್ದ ವ್ಯಕ್ತಿ ಇದೀಗ ಲೌಕಿಕ ಜೀವನದಿಂದ ದೂರವಾಗಿ, ಸನ್ಯಾಸದ ಕಡೆಗೆ ಹೆಜ್ಜೆ ಹಾಕಿದ್ದಾರೆ..

ಐ.ಆರ್.ಪೆರುಮಾಳ್.. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ.. ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಸನ್ಯಾಸಿಯಾಗಿ ಪ್ರತ್ಯಕ್ಷವಾಗಿದ್ದಾರೆ.. ನಿವೃತ್ತ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ್ ಫೋಟೋ ಈಗ ಫುಲ್ ವೈರಲ್ ಆಗಿದೆ..ದೇಶದ 13 ಅಖಾಡಗಳಿಂದ ಸಾಧುಗಳು, ಯೋಗಿಗಳು, ಬಾಬಾಗಳು ಮತ್ತು ಅಘೋರಿಗಳು ಕುಂಭಮೇಳಕ್ಕೆ ಆಗಮಿಸಿದ್ದಾರೆ.. ಆದರೆ, ಒಂದು ಕಾಲದಲ್ಲಿ ರಾಯಚೂರು ಡಿಸಿಯಾಗಿದ್ದ ಐ.ಆರ್.ಪೆರುಮಾಳ್ ಕಾಣಿಸಿಕೊಂಡಿದ್ದಾರೆ.. ಅವರನ್ನು ಈ ರೀತಿ ನೋಡಿದ ಜನರ ಹುಬ್ಬೇರುವಂತೆ ಮಾಡಿದ್ದಾರೆ.. ಗಂಟು ಕಟ್ಟಿದ ಕೂದಲು ಇರುವ ಫೋಟೋ ವೈರಲ್ ಆಗಿದ್ದು, ಐಎಎಸ್ ಅಧಿಕಾರಿಯ ವೈರಾಗ್ಯ ಜೀವನ ಅಚ್ಚರಿ ಮೂಡಿಸಿದೆ.. 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಅಧಿಕಾರಿ,, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು..

ರಾಜ್ಯದ ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ 2012ರಲ್ಲಿ ಅವರು ನಿವೃತ್ತರಾಗಿದ್ದರು..ವೃತ್ತಿ ಜೀವನದಿಂದ ನಿವೃತ್ತಿಯಾದ ಬಳಿಕ 2014 ರಲ್ಲಿ ತಮಿಳುನಾಡಿನ ಮದುರೈ ಜಿಲ್ಲೆಯ ಇರಂಜುಮುಡಿ ಶಿವನ ದೇವಾಲಯ ಬಳಿ ಮಠ ಕಟ್ಟಿಕೊಂಡಿದ್ದರು.. ಸನ್ಯಾಸತ್ವ ಸ್ವೀಕರಿಸಿ ಶಿವಯೋಗಿ ಪೆರುಮಾಳ್ ಸ್ವಾಮೀಜಿಯಾಗಿದ್ದ ನಿವೃತ್ತ ಅಧಿಕಾರಿ,,, ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುವ ಫೋಟೋ ಈಗ ವೈರಲ್ ಆಗಿದೆ..ಆಧ್ಯಾತ್ಮದತ್ತ ವಾಲಿದ ಎಷ್ಟೋ ಜನರು ಪ್ರಯಾಗರಾಜ್‌ನಲ್ಲಿರುವ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಳ್ತಿದ್ದಾರೆ.. ಅವರ ಸಾಲಿನಲ್ಲಿ ರಾಯಚೂರಿನಲ್ಲಿ ಡಿಸಿಯಾಗಿದ್ದ ಪೆರುಮಾಳರು ಒಬ್ಬರು ಅನ್ನೋದು ವಿಶೇಷ..