ಕರ್ನಾಟಕ

ಜನ ಕಲ್ಯಾಣವೇ ಮಂತ್ರ.. ಜನತಾ ಪ್ರಣಾಳಿಕೆ ಬಿಡುಗಡೆ

ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಭಾಷಾ ಚಳುವಳಿ, ಕಾರ್ಮಿಕ ಚಳುವಳಿ, ಪರಿಸರ ಚಳುವಳಿ, ಮಹಿಳಾ ಮತ್ತು ವಿದ್ಯಾರ್ಥಿ ಯುವಜನ ಚಳುವಳಿಗಳು ಒಗ್ಗೂಡಿ ನವಕರ್ನಾಟಕ ನಿರ್ಮಾಣಕ್ಕಾಗಿ ಜನತಾ ಪ್ರಣಾಳಿಕೆ ರೂಪಿಸಿವೆ.. ಡಮರುಗ ಬಾರಿಸುವ ಮೂಲಕ ಕಾರ್ಯಕ್ರಮವನ್ನ ಗಣ್ಯರು ಉದ್ಘಾಟನೆ ಮಾಡಿದ್ದಾರೆ..

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ.. ಪ್ರಮುಖ ರಾಜಕೀಯ ನಡುವೆ ಹೊಸ ಅಲೆ ರಾಜಕೀಯಕ್ಕೆ ನಾಂದಿ ಹಾಡಲಾಗಿದೆ.. ಜನರ ಕಲ್ಯಾಣವನ್ನೇ ಮಂತ್ರವಾಗಿಸಿಕೊಂಡು, ಕರುನಾಡಲ್ಲಿ ಪರ್ಯಾಯ ರಾಜಕೀಯ ಚಳುವಳಿಗೆ ನವಕರ್ನಾಟಕ ನಿರ್ಮಾಣ ಸಮಿತಿ ಚಾಲನೆ ನೀಡಿದೆ.. ಇಂದು ಬೆಂಗಳೂರಿನ ಭಾರತ್ ಸೈಟ್ಸ್ ಆ್ಯಂಡ್- ಗೈಡ್ಸ್ ಸಭಾಂಗಣದಲ್ಲಿ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.. ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಭಾಷಾ ಚಳುವಳಿ, ಕಾರ್ಮಿಕ ಚಳುವಳಿ, ಪರಿಸರ ಚಳುವಳಿ, ಮಹಿಳಾ ಮತ್ತು ವಿದ್ಯಾರ್ಥಿ ಯುವಜನ ಚಳುವಳಿಗಳು ಒಗ್ಗೂಡಿ ನವಕರ್ನಾಟಕ ನಿರ್ಮಾಣಕ್ಕಾಗಿ ಜನತಾ ಪ್ರಣಾಳಿಕೆ ರೂಪಿಸಿವೆ.. ಡಮರುಗ ಬಾರಿಸುವ ಮೂಲಕ ಕಾರ್ಯಕ್ರಮವನ್ನ ಗಣ್ಯರು ಉದ್ಘಾಟನೆ ಮಾಡಿದ್ದಾರೆ.. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅಧ್ಯಕ್ಷತೆಯಲ್ಲಿಂದು ಪರ್ಯಾಯ ರಾಜಕೀಯ ಚಳುವಳಿಗೆ ಕಹಳೆ ಊದಲಾಗಿದೆ..

* ಪರ್ಯಾಯ ರಾಜಕೀಯ ಚಳುವಳಿಯ ಪ್ರಣಾಳಿಕೆಯಲ್ಲಿ ಏನಿದೆ ಅಂತಾ ನೋಡೋದಾದ್ರೆ

* ನರೇಗಾ ಯೋಜನೆ ಕೆಲಸದ ಅವಧಿ 300 ದಿನ.. ಕೂಲಿಯೂ ಹೆಚ್ಚಳ
* ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನಿಗಧಿ.. ಟೆಂಡರ್‌ ವ್ಯವಸ್ಥೆ ಜಾರಿ
* ನಗರಾಭಿವೃದ್ಧಿ  ಪ್ರಾಧಿಕಾರ ರದ್ದು ಮಾಡಿ ಹಳ್ಳಿಗಳ ಅಭಿವೃದ್ಧಿಗೆ ಕ್ರಮ
* ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿ..  ಹಿಂದಿಗೆ ಕೊಕ್‌ ನೀಡಲಾಗುವುದು
* ರಾಜ್ಯದ ಎಲ್ಲಾ ನಿಗಮಗಳ ಕೆಲಸಗಾರರನ್ನ ಸರ್ಕಾರಿ ನೌಕರರು ಎಂದು ಪರಿಗಣನೆ
* ಅಂಗನವಾಡಿ ಸಹಾಯಕಿಯರು & ಕಾರ್ಯಕರ್ತೆಯರ ಕೆಲಸ ಖಾಯಂ
* ಪೊಲೀಸರಿಗೂ ನಿಗದಿತ ಕೆಲಸ ಮಾತ್ರವಲ್ಲ ವಾರದ ರಜೆ ಅವಕಾಶ
* ಮಹಿಳಾ ಸ್ವಸಹಾಯ ಸಂಘ - ಸ್ತ್ರೀ ಸಂಘಗಳು ನೀಡಿರುವ ಸಾಲ ರದ್ದು 
* ಲಂಚ ಪಡೆಯುವ ಅಧಿಕಾರಿ ಜೊತೆ ನೀಡುವವರಿಗೂ ಕಠಿಣ ಶಿಕ್ಷೆ

ಇನ್ನೂ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌,, ಜನ ಶಕ್ತಿ ಸಂಘಟನೆ ಆದ್ರೆ ಯಾವುದೇ ರಾಜಕೀಯ ನಾಯಕರ ಆಟ ನಡೆಯಲ್ಲ, ಎಲ್ಲ ಜಾತಿ, ಸಮುದಾಯದವರು ಒಟ್ಟಾಗಿ ಹೋರಾಟ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.. ಕಾಪೋರೇಟ್ ಕಂಪನಿಯವರನ್ನ ಕರೆದುಕೊಂಡು ಬಂದು ನಮ್ಮವರನ್ನೇ ಹೊರ ಹಾಕ್ತಿದ್ದಾರೆ, ಚಳುವಳಿಯಿಂದ ಸಮಾಜ ಬದಲಾವಣೆ ಸಾಧ್ಯವಿಲ್ಲ.. ವಿಧಾನಸೌಧದಲ್ಲಿ ಅಧಿಕಾರಕ್ಕೆ ಬಾರದೇ ಪ್ರೀಡಂಪಾರ್ಕ್‌ನಲ್ಲಿ ಹೋರಾಟ ಮಾಡಿದ್ರೆ ಏನ್ ಪ್ರಯೋಜನ.. ಹೀಗಾಗಿ ಅಧಿಕಾರದ ಅವಶ್ಯಕತೆ ಇದೆ ಎಂದಿದ್ದಾರೆ..

ರಾಜಕೀಯ ಕ್ರಾಂತಿಗೆ ಇಂದು ಬೆಂಗಳೂರಿನಲ್ಲಿ ಕಹಳೆ ಮೊಳಗಿಸಲಾಗಿದ್ದು, ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ.. ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿ ಘಟಾನುಘಟಿ ನಾಯಕರು,, ಪರ್ಯಾಯ ರಾಜಕೀಯ ಚಳುವಳಿಗೆ ನವಕರ್ನಾಟಕ ನಿರ್ಮಾಣ ಸಮಿತಿ ಮೂಲಕ ಚಾಲನೆ ನೀಡಿದ್ದು, ಹೊಸ ಭರವಸೆ ಹುಟ್ಟು ಹಾಕಿದ್ದಾರೆ..