ಮನೆಯ ನೀರಿನ ತೊಟ್ಟಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಡೆದಿದೆ. ಅದೇ ಗ್ರಾಮದ ಅಂಗಡಿ ಮಂಜಣ್ಣ ಎಂಬುವರರ ಪುತ್ರ ಕುಶಾಲ್ (3) ಮೃತ ಹೊಂದಿದ ಮಗು ಎನ್ನಲಾಗಿದೆ. ಮನೆ ಬಳಿ ಆಟವಾಡುವಾಗ ಮಗು ನೀರಿನ ತೊಟ್ಟಿಗೆ ಬಿದ್ದಿದೆ ಎನ್ನಲಾಗುತ್ತಿದೆ. ಮಗುವನ್ನು ಹುಡುಕಾಡಿದ ಪೋಷಕರಿಗೆ ಮಗು ನೀರಿನ ತೊಟ್ಟಿಯಲ್ಲಿ ಸಿಕ್ಕಿದ್ದು ಶಾಕ್ ಆದಂತಾಗಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ