ಇನ್ನೇನು ಕಾಂಗ್ರೆಸ್ ಪಾಳಯದಲ್ಲಿ ಭುಗಿಲೆದ್ದಿದ್ದ ಮುನಿಸು ತಣ್ಣಗಾಯ್ತು ಅನ್ನೋ ಹೊತ್ತಲ್ಲಿ, ಮತ್ತೆ ಬಿಜೆಪಿಯಲ್ಲಿ ಬಣ ಬಡಿದಾಟ ಸದ್ದು ಮಾಡುತ್ತಿರುವಂತೆ ಕಾಣುತ್ತಿದೆ. ರೆಬೆಲ್ ನಾಯಕರ ವಿರುದ್ಧ ವಿಜಯೇಂದ್ರ ಬಂದ ಕೆಂಡಾಮಂಡಲವಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತು ಇನ್ನಿತರರ ವಿರುದ್ಧ ಸಿಡಿದೆದ್ದಿರುವ ಮಾಜಿ ಶಾಸಕರು, ಜನವರಿ 25ಕ್ಕೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿ, ವರಿಷ್ಠರ ಭೇಟಿ ಮಾಡುವ ಸಾಧ್ಯತೆ ಇದೆ. ರೇಣುಕಾಚಾರ್ಯ ನೇತೃತ್ವದಲ್ಲಿ ಮಾಜಿ ಶಾಸಕರ ಸಭೆ ನಡೆಯಲಿದೆ.
ರೆಬೆಲ್ ನಾಯಕರ ನಡೆ ನೋಡಿಯೂ ಹೈಕಮಾಂಡ್ ತಟಸ್ಥವಾಗಿರುವುದು, ವಿಜಯೇಂದ್ರ ಬಣಕ್ಕೆ ಗೊಂದಲಕ್ಕೀಡು ಮಾಡಿದೆ. ಹೀಗಾಗಿ ರೆಬೆಲ್ ನಾಯಕರನ್ನು ಉಚ್ಚಾಟನೆ ಮಾಡುವ ಬಗ್ಗೆ ಹೈಕಮಾಂಡ್ ಬಳಿ ಮನವಿ ಮಾಡುವ ಸಾಧ್ಯತೆ ಇದೆ.