ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಅಂದ್ರೆ ಅದು ಟಾಕ್ಸಿಕ್ ಮತ್ತು ಕಾಂತಾರ-1.. ಈ 2 ಚಿತ್ರಗಳ ಮೇಲೆ ಇಲ್ಲಿಲ್ಲದ ನಿರೀಕ್ಷೆ ಇದೆ.. ಜಸ್ಟ್ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಕನ್ನಡದ ಚಿತ್ರಗಳ ಮೇಲೆ ಕಣ್ಣಿಟ್ಟಿದೆ.. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಸದ್ದು ಮಾಡೋದು ಕನ್ಫರ್ಮ್ ಎನ್ನಲಾಗ್ತಿದೆ.. ಇಂಥದ್ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗೆ ಸುತ್ತಿಕೊಂಡಿದ್ದ ವಿವಾದ ಇದೀಗ ಕಾಂತಾರಗೂ ಕಾಡ್ತಿದೆ.. ಕಾಂತಾರ ಸಿನಿಮಾದ ಮೊದಲ ಚಾಪ್ಟರ್ ಶೂಟಿಂಗ್ ಮಾಡುವಾಗ ಯಾವ್ದೇ ಸಮಸ್ಯೆ ಎದುರಾಗಿರ್ಲಿಲ್ಲ.. ಒಂದೇ ಒಂದು ಸಣ್ಣ ವಿವಾದವೂ ಸುದ್ದಿಯಾಗಿರ್ಲಿಲ್ಲ.. ಆದ್ರೀಗ ಕಾಂತಾರ ಸಿನಿಮಾದ ಪ್ರೀಕ್ವೆಲ್ ಶೂಟಿಂಗ್ ನಡೀತಿರೋ ಹೊತ್ತಲ್ಲಿ ಮೇಲಿಂದ ಮೇಲೆ ವಿವಾದಗಳು ಸದ್ದು ಮಾಡ್ತಿದೆ..
ಅಷ್ಟಕ್ಕೂ ಏನಿದು ಕಾಂತಾರ-1 ಕಾಂಟ್ರವರ್ಸಿಅನ್ನೋದ್ ನೋಡೋದ್ ಆದ್ರೆ.. ಇತ್ತೀಚೆಗೆ ಸಕಲೇಶಪುರ ತಾಲ್ಲೂಕಿನ ಹೆರೂರು ಗ್ರಾಮದ ಬಳಿ ಶೂಟಿಂಗ್ ನಡೆಯುತಿತ್ತು.. ಗೋಮಾಳ ಜಾಗದಲ್ಲಿ ಚಿತ್ರೀಕರಣ ಮಾಡ್ಬೇಕು ಅಂತಾ ಚಿತ್ರತಂಡ ಕೂಡ ಪರ್ಮಿಷನ್ ಕೂಡ ತೆಗೆದುಕೊಂಡಿದ್ದಾರೆ.. ಆದ್ರೆ ಅರಣ್ಯ ಜಾಗದಲ್ಲಿದ್ದ ಮರಗಳನ್ನು ಕಡಿದು, ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.. ಶೂಟಿಂಗ್‌ಗಾಗಿ ಮರಗಳನ್ನ ಕಡಿದ ಚಿತ್ರತಂಡದ ಮೇಲೆ ಇದೀಗ ಸುತ್ತಮುತ್ತಲಿನ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ ಚಿತ್ರತಂಡದ ಎಡವಟ್ಟುಗಳು ಒಂದೆರಡಲ್ಲ ಅಂತಿದ್ದಾರೆ ಸ್ಥಳೀಯರು.. ಜನವರಿ ಮೊದಲ ವಾರದಲ್ಲೇ ಅನುಮತಿ ಪಡೆಯದೇ ಶೂಟಿಂಗ್‌ಗೆ ಬೇಕಾದ ಐಟಂ ತಂದಿಟ್ಟಿದ್ದಕ್ಕೆ ಅರಣ್ಯ ಇಲಾಖೆ ದಂಡ ವಿಧಿಸಿತ್ತಂತೆ.. ಯಾವುದೇ ಪರ್ಮಿಷನ್ ತೆಗೆದುಕೊಳ್ಳದೇ ಮೊದಲೇ ಚಿತ್ರೀಕರಣ ಸ್ಥಳಕ್ಕೆ ವಸ್ತುಗಳನ್ನು ಏಕೆ ತಂದ್ರಿ ಅಂತಾ ಕೇಳಿದ್ದಾರೆ.. ಮೊದಲೇ ಎಡವಟ್ಟು ಮಾಡಿದ್ದ ಫಿಲ್ಮ್ ಟೀಂ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು 50 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.. ಆಮೇಲೆ ಪರ್ಮಿಷನ್ ಕೊಟ್ಟು ಕಾಡಲ್ಲಿ ಯಾವುದೇ ಸಮಸ್ಯೆ ಮಾಡ್ಬೇಡಿ ಅನ್ನೋ ಷರತ್ತು ಹಾಕಿ, ಶೂಟಿಂಗ್ ಮಾಡಿ ಅಂತಾ ಹೇಳಿದ್ರೂ, ಚಿತ್ರದಂಡ ಮತ್ತೆ ಎಡವಟ್ಟು ಮಾಡಿದೆ..
ಕಾಡನ್ನ ನಾಶ ಮಾಡದೇ ಶೂಟಿಂಗ್ ಮಾಡಿ ಅಂತಾ ಅನುಮತಿ ಕೊಟ್ರೂ ಇದೀಗ ಚಿತ್ರತಂಡ ಮರಗಳನ್ನ ಕಡಿದು, ಬೆಂಕಿ ಹಚ್ಚಿರೋದು ಪರಿಸರವಾದಿಗಳನ್ನ ಕೆರಳಿಸಿದೆ.. ಸಿನಿಮಾ ಚಿತ್ರೀಕರಣಕ್ಕೆ ಯಾವೆಲ್ಲ ಪರವಾನಿಗೆ ನೀಡಿದ್ದಾರೆ ಅಂತಾ ಫಸ್ಟ್ ಬಹಿರಂಗಪಡಿಸಿ ಅಂತಾ ಪಟ್ಟು ಹಿಡಿದಿದ್ದಾರೆ.. ಅರಣ್ಯದೊಳಗೆ ಬೆಂಕಿ ಹಾಕೋದ್ರಿಂದ ಕಾಡುಪ್ರಾಣಿಗಳು ಗಾಬರಿಯಾಗುತ್ತವೆ.. ವನ್ಯಜೀವಿಗಳಿರುವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು.. ಕೂಡಲೇ ಶೂಟಿಂಗ್ ಸ್ಟಾಪ್ ಮಾಡಿ,, ಪರಿಸರ ಉಳಿಸಿ, ಇಲ್ಲ ಅಂದ್ರೆ ದೊಡ್ಡಮಟ್ಟದಲ್ಲಿಯೇ ಪ್ರತಿಭಟನೆ ಮಾಡ್ತೇವೆ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ..
ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾವಾಗಿರುವ ಟಾಕ್ಸಿಕ್ ಚಿತ್ರತಂಡ ಬೆಂಗಳೂರಿನ ಎಚ್‌ಎಂಟಿಯಲ್ಲಿ ಮರಗಳನ್ನ ಕಡಿದಿದೆ ಅನ್ನೋ ಆರೋಪಕ್ಕೆ ಸಿಲುಕಿತ್ತು.. ಸಚಿವರೇ ಇದರಲ್ಲಿ ಎಂಟ್ರಿಯಾಗಿ ವಾರ್ನಿಂಗ್ ಕೂಡ ಕೊಟ್ಟಿದ್ದರು.. ಇದೀಗ ಕಾಂತಾರ ಪ್ರಿಕ್ವೆಲ್ ಸಿನಿಮಾ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿದೆ.. ಅರಣ್ಯ ನಾಶದ ಆರೋಪಕ್ಕೆ ಗುರಿಯಾಗಿದೆ.. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವುಪಡೆದುಕೊಳ್ಳುತ್ತೆ,, ನಟ, ನಿರ್ದೇಶಕ ರಿಷಬ್ ಶೆಟ್ಟಿ ಈ ಬಗ್ಗೆ ಏನ್ ಹೇಳ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ..