ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ಹೆಚ್ಚಾಗಿದೆ. ಎಷ್ಟೇ ಹೇಳಿದರೂ ಅಸಮಾಧಾನ ತಣ್ಣಗಾಗದ ಹಿನ್ನೆಲೆ ಹೈಕಮಾಂಡ್ ಮಧ್ಯ ಪ್ರವೇಶ ಮಾಡಲು ಮುಂದಾಗಿದೆ. ನಾಳೆ ರಾಜ್ಯಕ್ಕೆ ಉಸ್ತುವಾರಿ ರಾಧಾ ಮೋಹನ್ ದಾಸ್ ಆಗಮಿಸಲಿದ್ದಾರೆ. ನಾಳೆ 3 ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಆಗಮಿಸುತ್ತಿರುವ ರಾಧಾ ಮೋಹನ್ ದಾಸ್ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಸಂಘಟನೆ ಪರ್ವದ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ ಜಿಲ್ಲಾಧ್ಯಕ್ಷರ ಚುನಾವಣೆ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಸಂಜೆ ಏಳು ಗಂಟೆಗೆ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಯತ್ನಾಳ್ ಬಣದ ಹೇಳಿಕೆಗಳು, ರಾಜ್ಯಾಧ್ಯಕ್ಷ ಚುನಾವಣೆಯೂ ಚರ್ಚೆ ನಡೆಸಲಿದ್ದಾರೆ.