ಮಂಡ್ಯ : ಸಕ್ಕರೆನಾಡು ಮಂಡ್ಯದ ವಿ.ಸಿ.ಫಾರಂನಲ್ಲಿ ನಡೆದ ಕೃಷಿ ಮೇಳಕ್ಕೆ ಕೃಷಿ ಸಚಿವರೇ ಗೈರಾಗಿದ್ದಾರೆ. ತವರು ಜಿಲ್ಲೆಯ ಕೃಷಿ ಹಬ್ಬಕ್ಕೆ ಸಚಿವ ಎನ್.ಚಲುವರಾಯಸ್ವಾಮಿಯೇ ಗೈರಾಗಿದ್ದಾರೆ. ಮಂಡ್ಯ ಮಾತ್ರವಲ್ಲ ಹಳೇ ಮೈಸೂರು ಭಾಗದಲ್ಲೇ ಹೆಸರುವಾಸಿಯಾಗಿದ್ದ ಕೃಷಿ ಮೇಳಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಗೈರಾಗಿದ್ದಾರೆ. ಸಚಿವರು, ಶಾಸಕರು ಮಾತ್ರವಲ್ಲ ಜಿಲ್ಲಾಧಿಕಾರಿಯೂ ಚಕ್ಕರ್ ಹಾಕಿದ್ದು, ಅಲ್ಲದೇ ರೈತ ಸಂಘದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಮೇಳಕ್ಕೆ ಗೈರಾಗಿದ್ರು.
ಜನಪ್ರತಿನಿಧಿಗಳನ್ನ ಕಾದು ಕಾದು ಸುಸ್ತಾದ ಅಧಿಕಾರಿಗಳು ಕೊನೆಗೆ ಮೇಳಕ್ಕೆ ಕೃಷಿ ವಿವಿ ಉಪಕುಲಪತಿ ಡಾ.ಎಸ್.ವಿ.ಸುರೇಶ್ ರಿಂದ ಉದ್ಘಾಟನೆ ಮಾಡಿದ್ರು. ಬೆಳಿಗ್ಗೆ 9.30ಕ್ಕೆ ಉದ್ಘಾಟನೆಯಾಗಬೇಕಿದ್ದ ಮೇಳ 11.30ಕ್ಕೆ ಚಾಲನೆಯಾಯಿತು. ಕೃಷಿ ವಿಶ್ವ ವಿದ್ಯಾನಿಲಯ, ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಎರಡು ದಿನದ ಕೃಷಿ ಮೇಳ ನಡೆಯಲಿದ್ದು, ಎರಡು ದಿನದಲ್ಲಿ ಲಕ್ಷಾಂತರ ರೈತರು ಭಾಗಿಯಾಗುವ ನಿರೀಕ್ಷೆಯಿದೆ.
ಸಚಿವ ಚಲುವರಾಯಸ್ವಾಮಿರವರಿಗಾಗಿ ಒಂದು ವಾರ ಮುಂಚಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಡೇಟ್ ಕೊಟ್ಟು ಕೊನೆಗೆ ಕೈಕೊಟ್ಟಿರೋ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.