ದೇಶ

ಪಾಕ್‌ ದಾಳಿ ಮಾಹಿತಿ ನೀಡಿದ್ದ ಕುರಿಗಾಹಿ ನಿಧನ.. ಸೇನೆ ಸಂತಾಪ

999ರಲ್ಲಿ ಕಾಣೆಯಾದ ತಮ್ಮ ಕುರಿಗಳನ್ನು ಹುಡುಕುತ್ತಿದ್ದ ವೇಳೆ, ಪಾಕಿಸ್ತಾನಿ ಸೈನಿಕರು ಬತಾಲಿಕ್ ಪರ್ವತ ಶ್ರೇಣಿಯಲ್ಲಿ ಪಠಾಣಿ ದಿರಿಸಿನಲ್ಲಿ ಬಂಕರ್‌ಗಳನ್ನು ಅಗೆಯುತ್ತಿದ್ದುದನ್ನು ನಮ್ಗ್ಯಾಲ್ ನೋಡಿದ್ದರು. ಪ್ರಾಮಾಣಿಕವಾಗಿ ಈ ಬಗ್ಗೆ ಸೇನೆಗೆ ಆತ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚೆತ್ತ ಭಾರತದ ಮಿಲಿಟರಿ ಪ್ರತ್ಯುತ್ತರವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು.

1,999ರಲ್ಲಿ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನದ ಆಕ್ರಮಣದ ಬಗ್ಗೆ ಭಾರತೀಯ ಸೈನಿಕರನ್ನು ಎಚ್ಚರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕುರುಗಾಹಿ ತಾಶಿ ನಮ್ಗ್ಯಾಲ್ ನಿಧನಕ್ಕೆ ಭಾರತೀಯ ಸೇನೆ ಸಂತಾಪ ಸೂಚಿಸಿದೆ. ನಮ್ಗ್ಯಾಲ್ ಅವರು ಲಡಾಖ್‌ನ ಆರ್ಯನ್ ಕಣಿವೆಯಲ್ಲಿ ಶನಿವಾರ ಮೃತಪಟ್ಟಿದ್ದರು. ರಾಷ್ಟ್ರಕ್ಕೆ ತಾಶಿ ನಮ್ಗ್ಯಾಲ್ ಅವರು ನೀಡಿದ ಕೊಡುಗೆಗೆ ಸೇನೆಯು ಋಣಿಯಾಗಿದೆ ಮತ್ತು ಅವರ ನಿಸ್ವಾರ್ಥ ತ್ಯಾಗವನ್ನು ಎಂದೆಂದಿಗೂ ನೆನಪಿಸಿಕೊಳ್ಳಲಾಗುವುದು ಎಂದು ಭಾರತೀಯ ಸೇನೆ ತಿಳಿಸಿದೆ. ನಮ್ಗ್ಯಾಲ್ ಅವರ ಕುಟುಂಬಕ್ಕೆ ತಕ್ಷಣದ ಸಹಾಯವನ್ನು ಒದಗಿಸಲಾಗಿದೆ ಮತ್ತು ನಿರಂತರ ನೆರವನ್ನು ನೀಡುತ್ತೇವೆ ಎಂದಿದೆ. 1999ರಲ್ಲಿ ಕಾಣೆಯಾದ ತಮ್ಮ ಕುರಿಗಳನ್ನು ಹುಡುಕುತ್ತಿದ್ದ ವೇಳೆ, ಪಾಕಿಸ್ತಾನಿ ಸೈನಿಕರು ಬತಾಲಿಕ್ ಪರ್ವತ ಶ್ರೇಣಿಯಲ್ಲಿ ಪಠಾಣಿ ದಿರಿಸಿನಲ್ಲಿ ಬಂಕರ್‌ಗಳನ್ನು ಅಗೆಯುತ್ತಿದ್ದುದನ್ನು ನಮ್ಗ್ಯಾಲ್ ನೋಡಿದ್ದರು. ಪ್ರಾಮಾಣಿಕವಾಗಿ ಈ ಬಗ್ಗೆ ಸೇನೆಗೆ ಆತ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚೆತ್ತ ಭಾರತದ ಮಿಲಿಟರಿ ಪ್ರತ್ಯುತ್ತರವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು.