ಗದಗ (ಆ.30): ಮಹಿಳೆಯೊಬ್ಬರು ಕಾಣೆಯಾಗಿ ಮೂರು ದಿನಗಳ ಬಳಿಕ ಅಚ್ಚರಿಯ ರೀತಿಯಲ್ಲಿ ಭಾವಿಯೊಳಗೆ ಪ್ರತ್ಯಕ್ಷವಾಗಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗುಂಟಿ ಗ್ರಾಮದ ಜಮೀನೊಂದರ ನೀರಿಲ್ಲದ ಬಾವಿಯಲ್ಲಿ ಕಾಣೆಯಾಗಿದ್ದ ಮಹಿಳೆ ಜೀವಂತವಾಗಿ ಪ್ರತ್ಯಕ್ಷವಾಗಿದ್ದಾರೆ.
ಮೂರು ದಿನಗಳ ಕಾಲ ಅನ್ನ, ನೀರು ಇಲ್ಲದೆ ಆ ಮಹಿಳೆ ಹೇಗೆ ಆ ಬಾವಿಯಲ್ಲಿದ್ದರು ಎಂಬ ಸುದ್ದಿಯನ್ನ ಕೇಳಿ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಆ ಮಹಿಳೆ ಯಾರು? ಯಾಕೆ ಬಾವಿಯಲ್ಲಿ ಬಿದ್ದಿದ್ದಾದರು ಹೇಗೆ? ಈ ಎಲ್ಲಾ ಕುತುಹಲಕಾರಿ ಪ್ರಶ್ನೆಗೆ ಸ್ವತಃ ಆಕೆಯೇ ಉತ್ತರಿಸಿದ್ದಾಳೆ.
ಮಹಿಳೆ ಹೇಳಿದ್ದೆನು?
ಆ.20ರಂದು ನಸುಕಿನ ಜಾವ ಮನೆ ಅಂಗಳದಲ್ಲಿ ಕೆಲಸ ಮಾಡುವಾಗ ಅಲ್ಲಿಗೆ ಅಪರಿಚಿತರೊಬ್ಬರು ಸೀರೆಯುಟ್ಟು ಬಂದ್ರು. ಯಾರೆಂದು ಗೊತ್ತಾಗ್ಲಿಲ್ಲ. ನನ್ನ ಹತ್ರ ಬಂದು ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ಳು. ಕೈಬಳೆ, ಕಾಲುಂಗುರ ನೀಡುವಂತೆ ಒತ್ತಾಯ ಮಾಡಿದ್ಳು. ಆಮೇಲೆ ಕಣ್ಣು ಕಾಣದಂತೆ ಮರೆಮಾಡಿ ಕುತ್ತಿಗೆ ಹಿಡಿದು ಗೊವಿನ ಜೋಳದ ಹೊಲದ ಎಳೆದುಕೊಂಡು ಬಂದ್ಳು. ಅಲ್ಲಿ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದಳು. ನನಗೆ ಬಾವಿಗೆ ಬಿದ್ದ ಮೇಲೆ ಪ್ರಜ್ಞೆ ತಪ್ಪಿತು ಮಾರನೇ ದಿನ ನನಗೆ ಎಚ್ಚರವಾದಾಗ ಬಾವಿಯಲ್ಲಿ ಬಿದ್ದಿರುವುದು ಗೊತ್ತಾಯ್ತು. ಆಗ ಕಿರುಚಿಕೊಂಡರು ಯಾರೂ ಸಹಾಯಕ್ಕೆ ಬರಲಿಲ್ಲ. ಆ.22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ರು ಎನ್ನುತ್ತಿದ್ದಾಳೆ ಮಹಿಳೆ. ಹಾಗಾದರೆ ನಸುಕಿನ ಜಾವ ಮನೆ ಅಂಗಳದಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು ಯಾರು? ಎಂಬ ಪ್ರಶ್ನೆ ತೀವ್ರ ಕುತೂಹಲ ಆತಂಕ ಹುಟ್ಟಿಸಿದೆ. ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಮಹಿಳೆ. ಹೀಗಾಗಿ ಮೈಮೇಲೆ ತಾಳಿ ಉಂಗುರು ಚಿನ್ನದ ಸರ ಎಲ್ಲವೂ ತೊಟ್ಟಿದ್ದಾಳೆ. ಇದೆಲ್ಲ ಗಮನಿಸಿ ಪರಿಚಿತರೇ ಎಳೆದುಕೊಂಡು ಹೋದ್ರ? ಒಟ್ಟಿನಲ್ಲಿ ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.