ದೇಶ

ಎಸ್‌ಯುವಿಗೆ ಟ್ರಕ್ ಡಿಕ್ಕಿ : ಆರು ಮಂದಿ ಸಾವು

ಛತ್ತೀಸ್‌ಗಢದ ಬುಲೋದ್‌ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿ ಆರು ಜನರು ದುರ್ಮರಣ ಹೊಂದಿದ್ದಾರೆ.

ಛತ್ತೀಸ್‌ಗಢದ ಬುಲೋದ್‌ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿ ಆರು ಜನರು ದುರ್ಮರಣ ಹೊಂದಿದ್ದಾರೆ. ಎದುರು ದಿಕ್ಕಿನಿಂದ ಬರುತ್ತಿದ್ದ ಎಸ್‌ಯುವಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ . ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.  

ಇನ್ನು ಘಟನೆ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಜೋಶಿ ತಿಳಿಸಿದ್ದಾರೆ.