ದೇಶ

ತಾರಕ್ಕಕೇರಿದ ಯುಪಿಪಿಎಸ್ಸಿ ಆಕಾಂಕ್ಷಿಗಳು ಪ್ರತಿಭಟನೆ..!

ಉತ್ತರ ಪ್ರದೇಶದ ಪ್ರಯಾಗ್ ರಾಜ್​ ನಲ್ಲಿ ಯುಪಿಪಿಎಸ್ಸಿ ಆಕಾಂಕ್ಷಿಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಯುಪಿಪಿಎಸ್ಸಿ ಆಕಾಂಕ್ಷಿಗಳ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮುಂಬರುವ ಯುಪಿಪಿಎಸ್ಸಿ  ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆಗೆ ಒತ್ತಾಯಿಸಿ ಸತತ ನಾಲ್ಕು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಯುಪಿಪಿಎಸ್ಸಿ ಆಕಾಂಕ್ಷಿಗಳು 'ಒಂದು ದಿನ, ಒಂದು ಶಿಫ್ಟ್ ಪರೀಕ್ಷೆ' ನಡೆಸುವಂತೆ ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.  ಇಂದು ವಿದ್ಯಾರ್ಥಿಗಳ ಪ್ರತಿಭಟನೆ ತಾರಕ್ಕಕೇರಿದ್ದು, ಬ್ಯಾರಿಕೇಡ್ಗಳನ್ನು ಮುರಿದು ಯುಪಿಪಿಎಸ್ಸಿಯ ಗೇಟ್ ಸಂಖ್ಯೆ 2 ಅನ್ನು ತಲುಪಿ  ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.