ಸ್ಪೆಷಲ್ ಸ್ಟೋರಿ

ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕಿಡ್ನಿ ಸ್ಟೋನ್‌ ಆಗಿರಬಹುದು ಎಚ್ಚರ…

ಕಿಡ್ನಿ ಸ್ಟೋನ್‌ ಅನ್ನೋದು ಕಾಮನ್‌ ಸಮಸ್ಯೆ ಆಗಿದೆ. ಇದೊಂದು ಗಂಭೀರ ಆರೋಗ್ಯದ ಸಮಸ್ಯೆ ಆಗಿದ್ರೂ, ಹೆದರೋ ಅಗತ್ಯ ಇಲ್ಲ. ಆರೋಗ್ಯಕರ ಆಹಾರ ತಿಂದರೆ, ಮುನ್ನೆಚ್ಚರಿಕೆ ತೆಗೆದುಕೊಂಡರೆ ಕಿಡ್ನಿ ಸ್ಟೋನ್‌ ಆಗದಂತೆ ತಡೀಬಹುದು. ಹಾಗಾದ್ರೆ ಬನ್ನಿ ಕಿಡ್ನಿ ಸ್ಟೋನ್‌ ಬಗ್ಗೆ ತಿಳಿದುಕೊಳ್ಳೋಣ…

ಬೆಂಗಳೂರು: ಕಿಡ್ನಿ ಸ್ಟೋನ್ ಅಂದರೆ ಏನುಮೊದಲಬಾರಿ ಪದನ ಕೇಳಿದವ್ರು ಏನಪ್ಪಾ ಇದು ಕಿಡ್ನಿ ಅಲ್ಲಿ ಕಲ್ಲಾ ಅಂತ ಆಶ್ಚರ್ಯ ಪಟ್ಟಿರೊದು ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್‌ ಅನ್ನೋದು ಕಾಮನ್‌ ಸಮಸ್ಯೆ ಆಗಿದೆ. ಇದೊಂದು ಗಂಭೀರ ಆರೋಗ್ಯದ ಸಮಸ್ಯೆ ಆಗಿದ್ರೂ, ಹೆದರೋ ಅಗತ್ಯ ಇಲ್ಲ. ಆರೋಗ್ಯಕರ ಆಹಾರ ತಿಂದರೆ, ಮುನ್ನೆಚ್ಚರಿಕೆ ತೆಗೆದುಕೊಂಡರೆ ಕಿಡ್ನಿ ಸ್ಟೋನ್‌ ಆಗದಂತೆ ತಡೀಬಹುದು. ಹಾಗಾದ್ರೆ ಬನ್ನಿ ಕಿಡ್ನಿ ಸ್ಟೋನ್‌ ಬಗ್ಗೆ ತಿಳಿದುಕೊಳ್ಳೋಣ…

ಕಿಡ್ನಿ ನಮ್ಮ ದೇಹದ ಒಂದು ಪ್ರಮುಖ ಅಂಗ ಅನ್ನೋದು ನಮಗೆಲ್ಲಾ ಗೊತ್ತೆ ಇದೆ. ಕಿಡ್ನಿ ನಮ್ಮ ದೇಹದಲ್ಲಿರೋ ರಕ್ತವನ್ನ ಶುದ್ಧಿ ಮಾಡುತ್ತೆ. ಹಾಗಾಗಿ ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳೋದು ಮುಖ್ಯ. ಇನ್ನು ಕಿಡ್ನಿ ಸ್ಟೋನ್‌ ಏನು ಅಂತ ನೋಡೋದಾದ್ರೆ, ಕಿಡ್ನಿಯಲ್ಲಿ ಕೆಲವು ಕಾರಣಗಳಿಂದ ಉತ್ಪತ್ತಿಯಾಗುವ ಕಲ್ಲಿನಾಕಾರದ ವಸ್ತುವೇ ಕಿಡ್ನಿ ಸ್ಟೋನ್‌. ಕಿಡ್ನಿ ಸ್ಟೋನ್‌ಗಳು ಕ್ಯಾಲ್ಸಿಯಂ, ಆಕ್ಸಾಲೇಟ್‌, ಫಾಸ್ಫೇಟ್‌ ಅಥವಾ ಯೂರಿಕ್‌ ಆಮ್ಲದಿಂದ ಉಂಟಾಗುತ್ತೆ. ಈ ಕಿಡ್ನಿ ಕಲ್ಲುಗಳು ಮರಳಿನಷ್ಟು ಚಿಕ್ಕ ಗಾತ್ರದಿಂದ ಗಾಲ್ಫ್‌ ಚೆಂಡಿನಷ್ಟು ದೊಡ್ಡದಿರುತ್ತೆ.

ಕಿಡ್ನಿ ಸ್ಟೋನ್‌ ಹಲವು ಕಾರಣಗಳಿಂದ ಆಗಬಹುದು. ಅದರಲ್ಲಿ ಮುಖ್ಯ ಕಾರಣ ಅಂದ್ರೆ ಕಡಿಮೆ ನೀರು ಕುಡಿಯುವುದು. ದೇಹದಲ್ಲಿ ನೀರಿನ ಮಟ್ಟವನ್ನು ಸದಾ ಕಾಪಾಡಿಕೊಳ್ಳಬೇಕು. ನೀರು ಕಡಿಮೆಯಾದರೆ ಕಿಡ್ನಿಯಲ್ಲಿ ಸ್ಟೋನ್‌ ಉಂಟಾಗಬಹುದು. ಇನ್ನು ಅನಾರೋಗ್ಯಕರ ಆಹಾರ ಸೇವೆಯಿಂದಲೂ ಕಿಡ್ನಿಯಲ್ಲಿ ಸ್ಟೋನ್‌ ಉಂಟಾಗುತ್ತೆ. ಅದರಲ್ಲೂ ಕ್ಯಾಲ್ಸಿಯಂ, ಫಾಸ್ಫರಸ್‌, ಪ್ರೋಟೀನ್‌, ಯೂರಿಕ್‌ ಆಮ್ಲ, ಉಪ್ಪಿನಂಶ ಹೆಚ್ಚಾಗಿರುವ ಆಹಾರಗಳು ಹಾಗೂ ಹೆಚ್ಚಿನ ಮಾಂಸಾಹಾರ ಸೇವನೆಯಿಂದಲೂ ಕಿಡ್ನಿ ಸ್ಟೋನ್‌ ಆಗಬಹುದು.

ಸಣ್ಣ ಗಾತ್ರದ ಕಲ್ಲುಗಳು ಮೂತ್ರದೊಂದಿಗೆ ಹೊರಗೆ ಹೋಗುತ್ತೆ. ಆದರೆ ಕಲ್ಲುಗಳು ದೊಡ್ಡದಾದಂತೆ ಮೂತ್ರದೊಂದಿಗೆ ಹೊರಗೆ ಹೋಗದೆ ಕಿಡ್ನಿಯಲ್ಲೇ ಉಳಿಯುತ್ತವೆ. ಕಲ್ಲು ದೊಡ್ಡದಾದಂತೆ ಆಪರೇಷನ್‌ ಮಾಡಿಯೇ ಕಲ್ಲುಗಳನ್ನ ತೆಗೆಯಬೇಕಾಗುತ್ತೆ. ಇನ್ನು ಕಿಡ್ನಿ ಸ್ಟೋನ್‌ ಆಗಿದೆ ಅನ್ನೋದು ನಮಗೆ ಹೇಗೆ ಗೊತ್ತಾಗುತ್ತೆ ಅನ್ನೋ ಪ್ರಶ್ನೆ ಎಲ್ಲರಿಗೂ ಕಾಡುತ್ತೆ. ಸಾಮಾನ್ಯವಾಗಿ ಹೊಟ್ಟೆ, ಕಿಬ್ಬೊಟ್ಟೆ ಅಥವಾ ಬೆನ್ನಿನ ಒಂದು ಬದಿಯಲ್ಲಿ ಇದ್ದಕ್ಕಿದ್ದಂತೆ ತೀವ್ರ ನೋಡು ಕಂಡು ಬಂದರೆ ಅದು ಕಿಡ್ನಿ ಸ್ಟೋನ್‌ ನ ಲಕ್ಷಣವಾಗಿರಬಹುದು. ಕೆಲವೊಮ್ಮೆ ನಡೆದಾಡಲೂ ಆಗದಷ್ಟು ನೋವು ಕಂಡುಬರುತ್ತೆ. ಇಷ್ಟೇ ಅಲ್ಲ ಉರಿ ಮೂತ್ರ, ರಕ್ತದೊಂದಿಗೆ ಮೂತ್ರ ಹೋಗುವುದು ಅಥವಾ ಕೆಲವೊಮ್ಮೆ ವಾಂತಿ ಸಹ ಉಂಟಾಗುತ್ತೆ.

ಈ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಬೇಡಿ. ಡಾಕ್ಟರ್‌ ಬಳಿ ಹೋಗಿ ಪರೀಕ್ಷೆ ಮಾಡಿಸಿ, ಕಿಡ್ನಿ ಸ್ಟೋನ್‌ ಇದ್ದರೆ ಕೂಡಲೆ ಚಿಕಿತ್ಸೆ ಪಡೆಯಿರಿ. ಏನೂ ಆಗೋದಿಲ್ಲ, ಕೆಲವು ದಿನದಲ್ಲಿ ಸರಿ ಹೋಗುತ್ತೆ ಅಂತ ಸುಮ್ಮನಿದ್ದರೆ, ಅಥವಾ ಮನೆ ಮಾಡಿಕೊಂಡು ನಿರ್ಲಕ್ಷ್ಯ ಮಾಡಿದ್ರೆ ಕಿಡ್ನಿಗೂ ಹಾನಿಯಾಗೋ ಸಾಧ್ಯತೆ ಇರುತ್ತೆ. ಹಾಗೂ ಕಿಡ್ನಿ ಸ್ಟೋನ್‌ನ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನ ಸಂಪರ್ಕಿಸಿ.

ಕಿಡ್ನಿ ಸ್ಟೋನ್‌ ಆಗದಂತೆ ತಡೆಯೋದು ನಮ್ಮ ಕೈಯಲ್ಲೇ ಇದೆ. ಪ್ರತಿ ದಿನ ಹೆಚ್ಚು ನೀರು ಕುಡಿಯಬೇಕು, ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಕಿಡ್ನಿ ಚೆನ್ನಾಗಿದ್ದರೆ ಮಾತ್ರ ದೇಹದ ಬೇರೆ ಅಂಗಾಂಗಗಳ ಆರೋಗ್ಯವೂ ಚೆನ್ನಾಗಿರುತ್ತೆ. ಹಾಗಾಗಿ ಯಾವುದೇ ಕಾರಣಕ್ಕೂ ಕಿಡ್ನಿ ಸ್ಟೋನ್‌ ಬಗ್ಗೆ ಕೇರ್‌ಲೆಸ್‌ ಆಗಬೇಡಿ…