ಇದೀಗ ವಿಶ್ವ ಪ್ರಸಿದ್ಧ ತಾಣ ಮರವಂತೆ ಬೀಚ್ನಲ್ಲಿ ಶುಕ್ರವಾರ(ನ.29)ದಿಂದ ವಿನೂತನವಾದ ಸ್ಕೈ ಡೈನಿಂಗ್ ಆರಂಭಗೊಂಡಿದೆ. ಮಂಗಳೂರಿನ ಪಣಂಬೂರು ಬಳಿಕ ಇದು ರಾಜ್ಯದ ಎರಡನೇ ಸ್ಕೈ ಡೈನಿಂಗ್ ತಾಣವಾಗಿದ್ದು, ಈ ಸ್ಕೈ ಡೈನಿಂಗ್ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಉದ್ಘಾಟನೆಗೈದ ಶಾಸಕ ಗುರುರಾಜ ಗಂಟಿಹೊಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸ್ಕೈ ಡೈನಿಂಗ್ನ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದರಲ್ಲಿ 90 – 100 ಮೀಟರ್ ಎತ್ತರದಲ್ಲಿ ಕುಳಿತು ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರವನ್ನು ವೀಕ್ಷಿಸುತ್ತಾ ನಿಮ್ಮ ಕುಟುಂಬದ 5ರಿಂದ 9 ಜನರೊಂದಿಗೆ ಆಕಾಶದಲ್ಲಿ ತೇಲುತ್ತಾ ಊಟವನ್ನು ಸವಿಯಬಹುದು. ಇಲ್ಲಿನ ಟೇಬಲ್ಗಳು 360 ಡಿಗ್ರಿಯಲ್ಲಿ ತಿರುಗಲಿದ್ದು, ಇದರಿಂದ ಎಲ್ಲ ಭಾಗಗಳ ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಒಬ್ಬರಿಗೆ 500 ರೂ. ನಿಗದಿಪಡಿಸಲಾಗಿದೆ.