ಪ್ಯಾಲೆಸ್ತೀನ್ ಪರ ಬ್ಯಾಗ್ ಧರಿಸಿ ನಿನ್ನೆ ವಿವಾದಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ,, ಇಂದು 'Justice for Bangladesh Hindus' ಎಂದು ಪ್ರಿಂಟ್ ಆಗಿರುವ ಬ್ಯಾಗ್ ಧರಿಸಿ ಸಂಸತ್ತಿಗೆ ಆಗಮಿಸಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ನಿನ್ನೆ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಸಂಸತ್ತಿಗೆ ಬಂದ ಪ್ರಿಯಾಂಕಾ ಗಾಂಧಿ, ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸಲು 'ಪ್ಯಾಲೆಸ್ತೀನ್' ಎಂದು ಮುದ್ರಿತವಾಗಿರುವ ಬ್ಯಾಗ್ ಧರಿಸಿ ಬಂದಿದ್ದರು. ಇದೀಗ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ 'Justice for Bangladesh Hindus' ಎಂದು ಪ್ರಿಂಟ್ ಆಗಿರುವ ಬ್ಯಾಗ್ ಧರಿಸಿ ಸಂಸತ್ತಿಗೆ ಆಗಮಿಸಿದ್ದು, ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ.